ಬಾಂಗ್ಲಾ ವಿರುದ್ಧ ಇಬ್ಬರು ದಿಗ್ಗಜರ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್

18  August 2024

Pic credit: Google

ಪೃಥ್ವಿ ಶಂಕರ

Pic credit: Google

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 19 ರಂದು ನಡೆಯಲಿದೆ. ಈ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದೆ.

Pic credit: Google

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಈ ಟೆಸ್ಟ್ ಸರಣಿಯಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶವಿದ್ದು, ಅವರು ಜೋ ರೂಟ್ ಮತ್ತು ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

Pic credit: Google

ಸದ್ಯ ರೋಹಿತ್ ಶರ್ಮಾ ಅದ್ಭುತ ಫಾರ್ಮ್‌ನಲ್ಲಿರುವುದರಿಂದ ಈ ಸರಣಿಯಲ್ಲಿ ಅವರಿಬ್ಬರ ದಾಖಲೆಗಳನ್ನು ಮುರಿಯುವುದು ಖಚಿತ.

Pic credit: Google

ರೋಹಿತ್ ಶರ್ಮಾ ಇದುವರೆಗೆ 483 ಪಂದ್ಯಗಳಲ್ಲಿ 19234 ರನ್ ಗಳಿಸಿದ್ದಾರೆ. ಇದೀಗ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ 209 ರನ್ ಗಳಿಸಿದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಜೋ ರೂಟ್‌ರನ್ನು ಹಿಂದಿಕ್ಕಲಿದ್ದಾರೆ.

Pic credit: Google

ಇಂಗ್ಲೆಂಡ್​ನ ಮಾಜಿ ನಾಯಕ ಜೋ ರೂಟ್‌ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಒಟ್ಟು 19442 ರನ್ ಗಳಿಸಿದ್ದಾರೆ.

Pic credit: Google

ಇದಲ್ಲದೆ ರಾಹುಲ್ ದ್ರಾವಿಡ್ ದಾಖಲೆ ಮೇಲೆ ರೋಹಿತ್ ಶರ್ಮಾ ಕಣ್ಣಿಟ್ಟಿದ್ದಾರೆ. ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ತಲಾ 48 ಶತಕಗಳನ್ನು ಗಳಿಸಿದ್ದಾರೆ.

Pic credit: Google

ಹೀಗಾಗಿ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ರೋಹಿತ್ ಶತಕ ಬಾರಿಸಿದರೆ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಲಿದ್ದಾರೆ.