ಟೀಮ್ ಇಂಡಿಯಾಕ್ಕೆ ಬಿಗ್ ರಿಲೀಫ್: ರೋಹಿತ್ ಫುಲ್ ಖುಷ್

12-February-2024

Author: Vinay Bhat

ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1 ಅಂತರದಿಂದ ಸಮಬಲದಲ್ಲಿದೆ. ಹೀಗಾಗಿ ಉಳಿದಿರುವ ಮೂರು ಪಂದ್ಯ ರೋಚಕತೆ ಸೃಷ್ಟಿಸಿದೆ.

ಸಮಬಲ

ಟೆಸ್ಟ್ ಸರಣಿಯ ಮೂರನೇ ಪಂದ್ಯ ಫೆಬ್ರವರಿ 15 ರಿಂದ ರಾಜ್‌ಕೋಟ್‌ನಲ್ಲಿ ಪ್ರಾರಂಭವಾಗಲಿದ್ದು, ಇದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ಅಭ್ಯಾಸ ಶುರುಮಾಡಿದೆ.

ಮೂರನೇ ಟೆಸ್ಟ್

ಇದರೊಂದಿಗೆ ಟೀಮ್ ಇಂಡಿಯಾಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಇಂಜುರಿಯಿಂದ ಗುಣಮುಖರಾಗುತ್ತಿರುವ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಮರಳಿದ್ದಾರೆ.

ಶುಭ ಸುದ್ದಿ

ಗಾಯಗೊಂಡು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರಾಹುಲ್ ಮತ್ತೆ ಫಿಟ್ ಆಗಿದ್ದು, ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.

ಬ್ಯಾಟಿಂಗ್ ಅಭ್ಯಾಸ

ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮಹತ್ವದ ಅಪ್‌ಡೇಟ್ ನೀಡಿದ್ದು, ಯಾವುದೇ ತೊಂದರೆಯಿಲ್ಲದೆ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ 87 ರನ್'ಗಳ ಅಮೂಲ್ಯ ಕೊಡುಗೆ ನೀಡಿದ್ದರು.

87 ರನ್ಸ್

ಆಯ್ಕೆ ಸಮಿತಿಯು ಕಳೆದ 3 ಟೆಸ್ಟ್ ಪಂದ್ಯಗಳಿಗೆ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿ ಸೇರಿಸಿತ್ತು. ಜಡೇಜಾ ಕೂಡ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ರವೀಂದ್ರ ಜಡೇಜಾ