ಭಾರತ ಮೊದಲ ಪಂದ್ಯ ಗೆದ್ದಾಗ ಆಟಗಾರರ ಸಂಭಾವನೆ ಎಷ್ಟಿತ್ತು ಗೊತ್ತೇ?

08-February-2024

Author: Vinay Bhat

ಭಾರತ ಕ್ರಿಕೆಟ್ ತಂಡ ಸದ್ಯ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, ಉಭಯ ತಂಡಗಳು 1-1 ಅಂಕಗಳ ಸಮಬಲ ಸಾಧಿಸಿದೆ.

ಭಾರತ vs ಇಂಗ್ಲೆಂಡ್

ಭಾರತ ತಂಡವು ಟೆಸ್ಟ್ ಕ್ರಿಕೆಟ್'ನಲ್ಲಿ ಮೊದಲ ಗೆಲುವು ಸಾಧಿಸಿದ್ದು ಇಂಗ್ಲೆಂಡ್ ವಿರುದ್ಧ ಎಂಬುದು ಅನೇಕರಿಗೆ ತಿಳಿದಿಲ್ಲ. ಇದು 1952 ರಲ್ಲಿ ಸಂಭವಿಸಿತು.

ಮೊದಲ ಗೆಲುವು

ಇಂಗ್ಲೆಂಡ್ ತಂಡ ಭಾರತ ಪ್ರವಾಸದಲ್ಲಿದ್ದಾಗ ಭಾರತ ಜಯ ಸಾಧಿಸಿತ್ತು. ಚೆನ್ನೈನಲ್ಲಿ ಈ ಟೆಸ್ಟ್ ಪಂದ್ಯವು ಫೆಬ್ರವರಿ 6 ರಿಂದ 10 ರ ವರೆಗೆ ನಡೆಯಿತು.

ಇತಿಹಾಸ ಸೃಷ್ಟಿ

ಫೆಬ್ರವರಿ 10, 1952 ರಂದು, ಭಾರತವು ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಮತ್ತು 8 ರನ್‌ಗಳ ಮೊದಲ ಟೆಸ್ಟ್ ಜಯ ಗಳಿಸಿದ್ದು, ದೇಶದ ಕ್ರಿಕೆಟ್ ಪಯಣದಲ್ಲಿ ಮಹತ್ವದ ತಿರುವಾಗಿದೆ.

ಐತಿಹಾಸಿಕ ಜಯ

ಈ ತಂಡದ ಬಗ್ಗೆ ಮಾತನಾಡುವುದಾದರೆ, ನಾಯಕತ್ವವು ವಿಜಯ್ ಹಜಾರೆ ಅವರ ಕೈಯಲ್ಲಿತ್ತು. ಭಾರತ ತಂಡ ಈ ಪಂದ್ಯವನ್ನು ಇನ್ನಿಂಗ್ಸ್‌ನಿಂದ ಗೆದ್ದಿದೆ.

ವಿಜಯ್ ಹಜಾರೆ

ಭಾರತದ ಪರ ಅಂದು ಪೌಲಿ ಉಮಿರ್ಗರ್ ಶತಕ ಗಳಿಸಿದ್ದರು. ಇದೀಗ ಸುಮಾರು 72 ವರ್ಷಗಳ ನಂತರ ಭಾರತ ತಂಡ ಸಾಕಷ್ಟು ಪ್ರಗತಿ ಕಂಡಿದೆ.

ಇಂದು ಭಾರತ

ಆ ಸಮಯದಲ್ಲಿ ಭಾರತ ತಂಡವು ಟೆಸ್ಟ್ ಪಂದ್ಯಕ್ಕೆ ಕೇವಲ 250 ರೂಪಾಯಿಗಳನ್ನು ಪಡೆಯುತ್ತಿತ್ತು. ಆದರೆ ಈಗ ಒಂದು ಟೆಸ್ಟ್‌ಗೆ 15 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದೆ.

ಸಂಬಳ ಎಷ್ಟು?