ಕೊಹ್ಲಿ, ಜಡೇಜಾ ಇಲ್ಲ; ಸರ್ಫರಾಜ್ ಔಟ್: ಕೊನೆಯ 3 ಟೆಸ್ಟ್‌ಗಳಿಗೆ ಭಾರತ ತಂಡ

06-02-2024

ಕೊಹ್ಲಿ, ಜಡೇಜಾ ಇಲ್ಲ; ಸರ್ಫರಾಜ್ ಔಟ್: ಕೊನೆಯ 3 ಟೆಸ್ಟ್‌ಗಳಿಗೆ ಭಾರತ ತಂಡ

Author: Vinay Bhat

TV9 Kannada Logo For Webstory First Slide
ಮೂರನೇ ಟೆಸ್ಟ್'ಗೆ ಭಾರತದ ಸಂಭಾವ್ಯ ತಂಡ ನೋಡುವುದಾದರೆ, ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಓಪನರ್'ಗಳಾಗಿ ಕಣಕ್ಕಿಳಿಯಬಹುದು.

ಆರಂಭಿಕರು

ಮೂರನೇ ಟೆಸ್ಟ್'ಗೆ ಭಾರತದ ಸಂಭಾವ್ಯ ತಂಡ ನೋಡುವುದಾದರೆ, ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಓಪನರ್'ಗಳಾಗಿ ಕಣಕ್ಕಿಳಿಯಬಹುದು.

ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲರಾಗಿದ್ದರೆ ಅವರನ್ನು ಕೈಬಿಡಲಾಗುತ್ತಿತ್ತು.

ಶುಭ್'ಮನ್ ಗಿಲ್

ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲರಾಗಿದ್ದರೆ ಅವರನ್ನು ಕೈಬಿಡಲಾಗುತ್ತಿತ್ತು.

ಕೊಹ್ಲಿ ಇನ್ನೂ ಆಯ್ಕೆಗೆ ಲಭ್ಯವಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಅವರು ಕೊನೆಯ ಮೂರು ಟೆಸ್ಟ್‌ಗಳಿಗೆ ಮರಳುವ ಸಾಧ್ಯತೆಯಿಲ್ಲ. ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದಾರೆ.

ವಿರಾಟ್ ಕೊಹ್ಲಿ ಇಲ್ಲ

ಕೊಹ್ಲಿ ಇನ್ನೂ ಆಯ್ಕೆಗೆ ಲಭ್ಯವಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಅವರು ಕೊನೆಯ ಮೂರು ಟೆಸ್ಟ್‌ಗಳಿಗೆ ಮರಳುವ ಸಾಧ್ಯತೆಯಿಲ್ಲ. ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದಾರೆ.

ಕೆಎಲ್ ರಾಹುಲ್ ವಾಪಸ್

ರಾಹುಲ್ ನೋವಿನಿಂದಾಗಿ ಎರಡನೇ ಪಂದ್ಯವನ್ನು ತಪ್ಪಿಸಿಕೊಂಡರು. ಆದರೆ ಅವರು ಮೂರನೇ ಪಂದ್ಯಕ್ಕೆ ಮರಳುವ ಸಾಧ್ಯತೆಯಿದೆ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಸರ್ಫರಾಜ್ ಖಾನ್ ಔಟ್

ಮಿಡಲ್ ಆರ್ಡರ್‌ನಲ್ಲಿ ರಜತ್ ಪಟಿದಾರ್ ಇರುವ ಕಾರಣ ಸರ್ಫರಾಜ್ ಖಾನ್ ಅವರನ್ನು ತಂಡದಿಂದ ಕೈಬಿಡಬಹುದು.

ಜಡೇಜಾ ಇಲ್ಲ

ಜಡೇಜಾ ಇನ್ನೂ ಫಿಟ್ ಆಗಿಲ್ಲ, ಕೊನೆಯ ಮೂರು ಟೆಸ್ಟ್‌ಗಳಲ್ಲಿ ಅವರು ಆಡುವುದು ಅನುಮಾನ ಎಂದು ವರದಿಯಾಗಿದೆ. ಇವರು ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ.

ವಿಕೆಟ್ ಕೀಪರ್ಸ್

ಕೆಎಸ್ ಭರತ್ ಬ್ಯಾಟ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಧ್ರುವ್ ಜುರೆಲ್ ಅವರ ಬದಲಿಗೆ ಆಡುವ XI ನಲ್ಲಿ ಕಾಣಿಸುವ ಸಾಧ್ಯತೆ ಇದೆ.

ಆಲ್ ರೌಂಡರ್ಸ್

ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಇಬ್ಬರು ಆಲ್‌ರೌಂಡರ್‌ಗಳಾಗಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಅಶ್ವಿನ್ ಮತ್ತು ಅಕ್ಷರ್ ಪ್ರಮುಖ ಪಾತ್ರ ವಹಿಸಿದ್ದರು.

ಕುಲ್ದೀಪ್ ಯಾದವ್

ಕುಲ್ದೀಪ್ ಯಾದವ್ 2ನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 3ನೇ ಪಂದ್ಯದಲ್ಲೂ ಇವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಇತರ ಬೌಲರ್ಸ್

ಜಸ್ಪ್ರೀತ್ ಬುಮ್ರಾ ವೇಗಿ ದಾಳಿಯನ್ನು ಮುನ್ನಡೆಸಲಿದ್ದಾರೆ. ಮುಖೇಶ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ.