03-02-2024

ಅಂದು ಅರ್ಜುನ್ ಮಾಡಿದ ಸಹಾಯವನ್ನು ಮರೆಯದ ಜೈಸ್ವಾಲ್

Author: Vinay Bhat

ಜೈಸ್ವಾಲ್ ಮ್ಯಾಜಿಕ್

ಸದ್ಯ ಕ್ರಿಕೆಟ್ ಲೋಕದಲ್ಲಿ ಭರ್ಜರಿ ಸುದ್ದಿಯಲ್ಲಿರುವ ಆಟಗಾರ ಎಂದರೆ ಅದು ಯಶಸ್ವಿ ಜೈಸ್ವಾಲ್. ಕಾರಣ ಇಂಡೋ-ಇಂಗ್ಲೆಂಡ್ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ಅರ್ಜುನ್ ತೆಂಡೂಲ್ಕರ್

ದ್ವಿಶತಕ ಸಿಡಿಸಿದ ಜೈಸ್ವಾಲ್‌ಗೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ದೊಡ್ಡ ಸಹಾಯ ಮಾಡಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ.

ಮರೆಯಲಾಗದ ಗಿಫ್ಟ್

ಯಶಸ್ವಿ ಜೈಸ್ವಾಲ್ ಅವರು ಅರ್ಜುನ್ ತೆಂಡೂಲ್ಕರ್‌ಗೆ ಮಾಡಿದ ಉಪಕಾರವನ್ನು ಬಹುಶಃ ಎಂದಿಗೂ ಮರೆಯುವುದಿಲ್ಲ. ಅಂತಹ ಗಿಫ್ಟ್ ಅದು.

ಸಚಿನ್ ಭೇಟಿ

ಅರ್ಜುನ್ ಮಾಡಿದ ಸಹಾಯ ಏನು ಎಂದು ತಿಳಿದರೆ ನೀವು ಆಶ್ಚರ್ಯ ಪಡಬಹುದು. ಇದು ಯಶಸ್ವಿ ಜೈಸ್ವಾಲ್- ಸಚಿನ್ ತೆಂಡೂಲ್ಕರ್ ಭೇಟಿಗೆ ಸಂಬಂಧಿಸಿದೆ.

ಮನೆಯಲ್ಲಿ ಭೇಟಿ

ಜೈಸ್ವಾಲ್ ಮತ್ತು ಸಚಿನ್ ನಡುವೆ ಅರ್ಜುನ್ ಮೀಟಿಂಗ್ ಏರ್ಪಡಿಸಿದ್ದರು. ಕ್ರಿಕೆಟ್ ದೇವರನ್ನು ಭೇಟಿಯಾಗಲು ಯಶಸ್ವಿ ಮನೆಗೆ ಬಂದಿದ್ದರು.

ಸ್ನೇಹಿತರು

ಯಶಸ್ವಿ ಮತ್ತು ಅರ್ಜುನ್ ಉತ್ತಮ ಸ್ನೇಹಿತರಾಗಿದ್ದಾರೆ. ಅವರಿಬ್ಬರು ಮುಂಬೈನಲ್ಲಿ ಕ್ರಿಕೆಟ್ ಆಡಿದ್ದಾರೆ. ಅರ್ಜುನ್ ಜೊತೆಗಿನ ಪರಿಚಯದಿಂದ ಯಶಸ್ವಿಗೆ ಲಾಭವಾಗಿದೆ.

ಬ್ಯಾಟ್ ಗಿಫ್ಟ್

ಸಚಿನ್ ಅವರು ಯಶಸ್ವಿಗೆ ಹಸ್ತಾಕ್ಷರವಿರುವ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ಜೈಸ್ವಾಲ್ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.