ಭಾರತದ ಪ್ರವಾಸದಿಂದ ಆಫ್ರಿಕಾಕ್ಕೆ ಕೋಟಿ ಹಣ: ಹೇಗೆ ಗೊತ್ತೇ?
09 December 2023
Author: Vinay Bhat
ಭಾರತ-ದಕ್ಷಿಣ ಆಫ್ರಿಕಾ ನಡುವಣ ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸರಣಿಯು ಡಿಸೆಂಬರ್ 10 ರಿಂದ ಪ್ರಾರಂಭವಾಗಲಿದ್ದು, ಟಿ20, ODI ಮತ್ತು ಟೆಸ್ಟ್ ಸರಣಿಗಳು ನಡೆಯಲಿವೆ.
ಭಾರತ-ಆಫ್ರಿಕಾ
ಭಾರತ ತಂಡ ಯಾವುದೇ ದೇಶಕ್ಕೆ ಪ್ರವಾಸ ಕೈಗೊಂಡರೆ ಅದು ದೊಡ್ಡ ಸರಣಿಯಾಗುತ್ತದೆ. ಏಕೆಂದರೆ ಟೀಮ್ ಇಂಡಿಯಾದ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಎಲ್ಲೆಡೆ ಬರುತ್ತಾರೆ.
ಭಾರತಕ್ಕೆ ಬೇಡಿಕೆ
ಟೀಮ್ ಇಂಡಿಯಾದ ಈ ಪ್ರವಾಸವು ದಕ್ಷಿಣ ಆಫ್ರಿಕಾಕ್ಕೂ ಅಷ್ಟೇ ವಿಶೇಷ ಮತ್ತು ಸ್ಮರಣೀಯವಾಗಿರುತ್ತದೆ. ಏಕೆಂದರೆ ದಕ್ಷಿಣ ಆಫ್ರಿಕಾ ಮಂಡಳಿ ಇದರಿಂದ ಕೋಟ್ಯಂತರ ರೂಪಾಯಿ ಗಳಿಸಲಿದೆ.
ಕೋಟಿಗಟ್ಟಲೆ ಆದಾಯ
ಕ್ರಿಕ್‌ಬಜ್ ಪ್ರಕಾರ, ಭಾರತ ಸುಮಾರು ಒಂದು ತಿಂಗಳ ಕಾಲ ಆಫ್ರಿಕಾದಲ್ಲಿ ಇರಲಿದೆ. ಈ ಪ್ರವಾಸದಿಂದಾಗಿ ಆಫ್ರಿಕಾ ಮಂಡಳಿ ಸುಮಾರು 68 ಮಿಲಿಯನ್ ಡಾಲರ್ (ಸುಮಾರು 600 ಕೋಟಿ) ಗಳಿಸಲಿದೆ.
ವರದಿ ಏನು ಹೇಳುತ್ತದೆ?
ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳು ನಡೆಯಲಿವೆ. ದಕ್ಷಿಣ ಆಫ್ರಿಕಾ ಮಂಡಳಿಯು ಪ್ರತಿ ಪಂದ್ಯದಿಂದ 9 ಮಿಲಿಯನ್ ಡಾಲರ್ ಗಳಿಸಲಿದೆ.
ಆಫ್ರಿಕನ್ ಬೋರ್ಡ್
ಆಫ್ರಿಕನ್ ಕ್ರಿಕೆಟ್ ಮಂಡಳಿ ಕಳೆದ 3 ವರ್ಷಗಳಲ್ಲಿ ಸುಮಾರು 30 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಇಂಡಿಯಾ ಪ್ರವಾಸ ಸಂಪೂರ್ಣ ನಷ್ಟವನ್ನು ತೆಗೆದುಹಾಕಬಹುದು.
ನಷ್ಟದಲ್ಲಿ ಆಫ್ರಿಕಾ
ಈ ಬಾರಿಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ.
ಭಾರತ-ಆಫ್ರಿಕಾ
ಒಂದು ವರ್ಷದಲ್ಲಿ ಜಸ್ಪ್ರೀತ್ ಬುಮ್ರಾ ಎಷ್ಟು ಕೋಟಿ ಗಳಿಸುತ್ತಾರೆ ಗೊತ್ತೇ?