06-05-2024

T20 ವಿಶ್ವಕಪ್‌ಗೆ ಭಾರತ- ಪಾಕ್ ಹೊಸ ಜೆರ್ಸಿ ಬಿಡುಗಡೆ

Author: ಪೃಥ್ವಿ ಶಂಕರ

2024ರ ಐಪಿಎಲ್ ಮುಗಿದ ತಕ್ಷಣವೇ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಪಂದ್ಯಾವಳಿಗೆ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯ ವಹಿಸಲಿವೆ.

ಈಗಾಗಲೇ ಈ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಒಟ್ಟಾರೆ 19 ಸದಸ್ಯರ ತಂಡ ಅಮೆರಿಕಕ್ಕೆ ಹಾರಲಿದೆ.

ಈ ಮಿನಿ ವಿಶ್ವಸಮರದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಆಡಲಿದೆ.

ನಂತರ ಜೂನ್ 9 ರಂದು ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಆದರೆ ಈ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಅದಾಗ್ಯೂ ಪಿಸಿಬಿ ಈ ಪಂದ್ಯಾವಳಿಗಾಗಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

ಪಾಕಿಸ್ತಾನದ ಹೊಸ ಜೆರ್ಸಿಯ ಪೋಸ್ಟರ್‌ನಲ್ಲಿ ಕ್ಯಾಪ್ಟನ್ ಬಾಬರ್ ಆಝಂ, ಶಾಹೀನ್ ಅಫ್ರಿದಿ, ಶಾದಾಬ್ ಖಾನ್, ರಿಜ್ವಾನ್ ಮತ್ತು ನಸೀಮ್ ಶಾ ಕಾಣಿಸಿಕೊಂಡಿದ್ದಾರೆ.

ಪಾಕ್ ಮಂಡಳಿಯಂತೆ ಬಿಸಿಸಿಐ ಕೂಡ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಹೊಸ ಟಿ20 ಜೆರ್ಸಿಯನ್ನು ಬಿಡುಗಡೆ ಮಾಡಿದೆ.

ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆಯ ವಿಡಿಯೋದಲ್ಲಿ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದಾರೆ.