05-11-2023

ಸೆಮೀಸ್​ಗೆ 2 ತಂಡ ಎಂಟ್ರಿ: ವಿಶ್ವಕಪ್ ಪಾಯಿಂಟ್ಸ್ ಟೇಬಲ್ ಇಲ್ಲಿದೆ

ಭಾರತ

ಟೀಮ್ ಇಂಡಿಯಾ ಆಡಿರುವ ಏಳು ಪಂದ್ಯಗಳ ಪೈಕಿ ಏಳರಲ್ಲೂ ಗೆದ್ದು 14 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿದೆ. ಜೊತೆಗೆ ಸೆಮಿ ಫೈನಲ್'ಗೆ ಪ್ರವೇಶಿಸಿದೆ.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ತಂಡ ಆಡಿರುವ ಏಳು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು 12 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿದ್ದು, ಸೆಮೀಸ್​ಗೆ ಲಗ್ಗೆಯಿಟ್ಟಿದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡ ಆಡಿರುವ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು, ಎರಡರಲ್ಲಿ ಸೋಲುಂಡು 10 ಅಂಕ ಸಂಪಾದಿಸಿ ಮೂರನೇ ಸ್ಥಾನದಲ್ಲಿದೆ.

ನ್ಯೂಝಿಲೆಂಡ್

ಕಿವೀಸ್ ಆಡಿರುವ 8 ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದು, ನಾಲ್ಕರಲ್ಲಿ ಸೋತು ಎಂಟು ಅಂಕ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿದೆ.

ಪಾಕಿಸ್ತಾನ

ಪಾಕಿಸ್ತಾನ ತಂಡ ಕೂಡ ಆಡಿರುವ ಎಂಟು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದು, ನಾಲ್ಕರಲ್ಲಿ ಸೋಲು ಕಂಡು 8 ಅಂಕ ಸಂಪಾದಿಸಿ 5ನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ತಂಡ 7 ಪಂದ್ಯಗಳ ಪೈಕಿ ತಲಾ ನಾಲ್ಕು ಗೆಲುವು, 3 ಸೋಲು ಕಂಡು 8 ಅಂಕ ಸಂಪಾದಿಸಿ ಆರನೇ ಸ್ಥಾನದಲ್ಲಿದೆ.

ಶ್ರೀಲಂಕಾ

ಶ್ರೀಲಂಕಾ ತಂಡ ಆಡಿರುವ ಏಳು ಪಂದ್ಯಗಳ ಪೈಕಿ ಐದರಲ್ಲಿ ಸೋತು, ಎರಡರಲ್ಲಿ ಗೆದ್ದು ನಾಲ್ಕು ಅಂಕದೊಂದಿಗೆ 7ನೇ ಸ್ಥಾನದಲ್ಲಿದೆ.

ನೆದರ್ಲೆಂಡ್ಸ್

ನೆದರ್ಲೆಂಡ್ಸ್ ತಂಡ ಆಡಿರುವ ಏಳು ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಗೆದ್ದು ನಾಲ್ಕು ಅಂಕ ಸಂಪಾದಿಸಿ ಎಂಟನೇ ಸ್ಥಾನದಲ್ಲಿದೆ.

ಬಾಂಗ್ಲಾದೇಶ

ಬಾಂಗ್ಲಾದೇಶ ತಂಡ ಆಡಿರುವ 7 ಪಂದ್ಯಗಳ ಪೈಕಿ ಆರರಲ್ಲಿ ಸೋಲು, ಒಂದರಲ್ಲಿ ಗೆದ್ದು 9ನೇ ಸ್ಥಾನದಲ್ಲಿದ್ದು, ಟೂರ್ನಿಯಿಂದ ಹೊರಬಿದ್ದಿದೆ.

ಇಂಗ್ಲೆಂಡ್

ಇಂಗ್ಲೆಂಡ್ ತಂಡ ಕೂಡ 7 ಪಂದ್ಯಗಳ ಪೈಕಿ ಆರರಲ್ಲಿ ಸೋಲುಂಡು 2 ಅಂಕ ಸಂಪಾದಿಸಿ 10ನೇ ಸ್ಥಾನದಲ್ಲಿದ್ದು, ಟೂರ್ನಿಯಿಂದ ಔಟಾಗಿದೆ.

ಇಂಡೋ-ಆಫ್ರಿಕಾ ಕದನಕ್ಕೆ ಮಳೆ ಕಾಟ?: ಹವಾಮಾನ ವರದಿ