05-November-2024
ಇಂಡೋ-ಆಫ್ರಿಕಾ ಕದನಕ್ಕೆ ಮಳೆ ಕಾಟ?: ಹವಾಮಾನ ವರದಿ
ಇಂಡೋ-ಆಫ್ರಿಕಾ
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿ ಆಗಲಿದೆ.
ಪಂದ್ಯ ಎಲ್ಲಿ?
ಸೆಮೀಸ್ಗೆ ಲಗ್ಗೆಯಿಟ್ಟಿರುವ ಇಂಡೋ-ಆಫ್ರಿಕಾ ಕದನ ಕೋಲ್ಕತ್ತಾದ ಪ್ರಸಿದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಮಳೆ ಕಾಟ?
ಹವಾಮಾನ ಇಲಾಖೆ ಪ್ರಕಾರ, ನವೆಂಬರ್ 5 ರಂದು ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಕೋಲ್ಕತ್ತಾದಲ್ಲಿ ಬಿಸಿಲಿನ ವಾತಾವರಣ ಇರಲಿದೆ.
ಮಳೆ ಇಲ್ಲ
ಇಂದಿನ ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆಯಿಲ್ಲ. ಗರಿಷ್ಠ ತಾಪಮಾನ ಸುಮಾರು 32 ಡಿಗ್ರಿ, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ.
ಪಿಚ್ ಹೇಗಿದೆ?
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸಣ್ಣ ಮೈದಾನವಾಗಿದೆ. ಇಲ್ಲಿನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಕಾರಿಯಾಗಿದೆ ಎನ್ನಲಾಗಿದೆ.
ಟಾಸ್ ಪಾತ್ರ
ಈ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಅನುಕೂಲವಾಗಬಹುದು. ಹೀಗಿರುವಾಗ, ಟಾಸ್ ಈ ಪಂದ್ಯದಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ.
ಪಂದ್ಯ ಆರಂಭ
ಭಾರತ-ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಕೊಹ್ಲಿ ಹುಟ್ಟುಹಬ್ಬ
ಇಂದು ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬ ಕೂಡ ಹೌದು. 35ನೇ ವರ್ಷಕ್ಕೆ ಕಾಲಿಟ್ಟಿರುವ ಕೊಹ್ಲಿ ಬ್ಯಾಟ್ನಿಂದ ಶತಕದ ನಿರೀಕ್ಷೆ ಇದೆ.
ಬುಮ್ರಾ ವಿರುದ್ಧ ಕೇಳಿ ಬಂತು ದೊಡ್ಡ ಆರೋಪ: ತನಿಖೆಗೆ ಆಗ್ರಹ
ಇನ್ನಷ್ಟು ಓದಿ