02-12-2023
ಪಾಕಿಸ್ತಾನಕ್ಕೆ ಭಾರೀ ಮುಖಭಂಗ: ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ
Author: Vinay Bhat
ಭಾರತಕ್ಕೆ ಜಯ
ಶುಕ್ರವಾರ ರಾಯ್‌ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 20 ರನ್'ಗಳ ಜಯ ಸಾಧಿಸುವ ಮೂಲಕ ಟಿ20 ಸರಣಿ ವಶಪಡಿಸಿಕೊಂಡಿದೆ.
ವಿಶ್ವದಾಖಲೆ
ಈ ಗೆಲುವಿನ ಮೂಲಕ ಭಾರತ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದ್ದು, ಅತಿ ಹೆಚ್ಚು ಟಿ20 ಅಂತರರಾಷ್ಟ್ರೀಯ ಗೆಲುವು ಸಾಧಿಸಿದ ತಂಡವಾಗಿದೆ.
136 ಗೆಲುವು
ಟೀಮ್ ಇಂಡಿಯಾ ಈವರೆಗೆ ಆಡಿರುವ 213 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 136 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅತಿ ಹೆಚ್ಚು ಮ್ಯಾಚ್ ಗೆದ್ದಿದೆ.
ಪಾಕ್ ದಾಖಲೆ ಉಡೀಸ್
ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದು, 226 ಪಂದ್ಯಗಳಲ್ಲಿ 135 ಗೆಲುವು ಸಾಧಿಸಿದೆ. ನ್ಯೂಝಿಲೆಂಡ್ 102 ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ.
4ನೇ-5ನೇ ಸ್ಥಾನ
T20I ಸ್ವರೂಪದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕ್ರಮವಾಗಿ ನಾಲ್ಕು ಮತ್ತು ಐದನೇ ತಂಡಗಳಾಗಿವೆ.
2006 ರಲ್ಲಿ ಪದಾರ್ಪಣೆ
2006 ರಿಂದ, ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿ T20I ಗೆ ಪಾದಾರ್ಪಣೆ ಮಾಡಿದ ಭಾರತ, ಈ 17 ವರ್ಷಗಳಲ್ಲಿ ಒಟ್ಟು 13 ನಾಯಕರನ್ನು ಕಂಡಿದೆ.
ರೋಹಿತ್ ಕ್ಯಾಪ್ಟನ್
ರೋಹಿತ್ ಶರ್ಮಾ ಗೆಲುವಿನ ಶೇಕಡಾವಾರು (76.47) ವಿಷಯದಲ್ಲಿ ಅತ್ಯಂತ ಯಶಸ್ವಿಯಾಗಿದ್ದರೆ, ಕೊಹ್ಲಿ ಅಧಿಕಾರಾವಧಿಯಲ್ಲಿ 50 ಪಂದ್ಯಗಳಲ್ಲಿ 30 ಗೆಲುವು ಸಾಧಿಸಿತ್ತು.
110 ಆಟಗಾರರು
ಈ 213 ಪಂದ್ಯಗಳಲ್ಲಿ, ಭಾರತವು 110 ಆಟಗಾರರನ್ನು ಕಣಕ್ಕಿಳಿಸಿದೆ. ಶಹಬಾಜ್ ಅಹ್ಮದ್ ಅವರು ಕ್ಯಾಪ್ ಸಂಖ್ಯೆ 110 ಆಗಿದ್ದು, ಕೊನೆಯದಾಗಿ ಭಾರತಕ್ಕೆ ಪಾದಾರ್ಪಣೆ ಮಾಡಿದವರು.
MI ತಂಡದಲ್ಲಿ ಬಿರುಕು?: ಇನ್ಸ್ಟಾದಲ್ಲಿ ಬಾಂಬ್ ಸಿಡಿಸಿದ ಬುಮ್ರಾ