ಭಾರತ ತಂಡದಲ್ಲಿ 4 ಬದಲಾವಣೆ: ಯಾರು ಇನ್?, ಯಾರು ಔಟ್?
15 February 2024
Author: Vinay Bhat
ಮೂರನೇ ಟೆಸ್ಟ್ ಪಂದ್ಯ ರಾಜ್ಕೋಟ್'ನಲ್ಲಿ ಆರಂಭವಾಗಿದ್ದು, ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತ-ಇಂಗ್ಲೆಂಡ್
ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ನಾಲ್ಕು ಮಹತ್ವದ ಬದಲಾವಣೆ ಮಾಡಲಾಗಿದೆ. ಇಬ್ಬರು ಆಟಗಾರರು ಪದಾರ್ಪಣೆ ಮಾಡಿದ್ದಾರೆ.
4 ಬದಲಾವಣೆ
ಬಹಳ ಸಮಯದಿಂದ ಅಂತರರಾಷ್ಟ್ರೀಯ ಪಂದ್ಯವಾಡಲು ಕಾದು ಕುಳಿತಿದ್ದ ಸರ್ಫರಾಜ್ ಖಾನ್ ಅವರಿಗೆ ಕೊನೆಗೂ ಅವಕಾಶ ಸಿಕ್ಕಿದ್ದು, ಇಂದು ಪದಾರ್ಪಣೆ ಮಾಡಿದ್ದಾರೆ.
ಸರ್ಫರಾಜ್ ಖಾನ್
ಕಳಪೆ ಪ್ರದರ್ಶನ ತೋರಿದ್ದ ಕೆಎಸ್ ಭರತ್ ಜಾಗಕ್ಕೆ ವಿಕೆಟ್-ಕೀಪರ್ ಬ್ಯಾಟರ್ ದ್ರುವ್ ಜುರೆಲ್ ಆಯ್ಕೆ ಆಗಿದ್ದು, ಇವರು ಕೂಡ ಪದಾರ್ಪಣೆ ಮಾಡಿದ್ದಾರೆ.
ದ್ರುವ್ ಜುರೆಲ್
ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಕಮ್ಬ್ಯಾಕ್ ಮಾಡಿದ್ದಾರೆ. ಅಕ್ಷರ್ ಪಟೇಲ್ ಆಡುವ ಬಳಗದಿಂದ ಹೊರಬಿದ್ದಿದ್ದಾರೆ.
ಜಡೇಜಾ ಕಮ್ಬ್ಯಾಕ್
ಮೊಹಮ್ಮದ್ ಸಿರಾಜ್ ಕೂಡ ಆಡುವ ಬಳಗಕ್ಕೆ ಬಂದಿದ್ದಾರೆ. ಇವರಿಗೆ ಮುಖೇಶ್ ಕುಮಾರ್ ಜಾಗ ಬಿಟ್ಟುಕೊಟ್ಟಿದ್ದಾರೆ.
ಮೊಹಮ್ಮದ್ ಸಿರಾಜ್
ರೋಹಿತ್ ಶರ್ಮಾ, ಜೈಸ್ವಾಲ್, ಗಿಲ್, ರಜತ್ ಪಟಿದಾರ್, ಸರ್ಫರಾಜ್, ಜಡೇಜಾ, ದ್ರುವ್ ಜುರೆಲ್, ಆರ್. ಅಶ್ವಿನ್, ಕುಲ್ದೀಪ್, ಬುಮ್ರಾ, ಸಿರಾಜ್.
ಭಾರತ ಪ್ಲೇಯಿಂಗ್ XI
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ರೂಟ್, ಬೈರ್‌ಸ್ಟೋ, ಸ್ಟೋಕ್ಸ್, ಫೋಕ್ಸ್, ಅಹ್ಮದ್, ಹಾರ್ಟ್ಲಿ, ವುಡ್, ಜೇಮ್ಸ್ ಆಂಡರ್ಸನ್.
ಇಂಗ್ಲೆಂಡ್ ಪ್ಲೇಯಿಂಗ್ XI
ರಾಜ್ಕೋಟ್ನಲ್ಲಿ ರೋಹಿತ್ ತಂಗಿರುವ ರೂಮ್ ಹೇಗಿದೆ ನೋಡಿ