13-02-2024

ರಾಜ್ಕೋಟ್​ನಲ್ಲಿ ರೋಹಿತ್ ತಂಗಿರುವ ರೂಮ್ ಹೇಗಿದೆ ನೋಡಿ

Author: Vinay Bhat

ಭಾರತ-ಇಂಗ್ಲೆಂಡ್

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಸರಣಿ 1-1 ಅಂಕಗಳ ಅಂತರದಿಂದ ಸಮಬಲಗೊಂಡಿದೆ.

ರಾಜ್‌ಕೋಟ್

ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಗುಜರಾತ್‌ನ ರಾಜ್‌ಕೋಟ್ ನಗರವನ್ನು ತಲುಪಿದ್ದು, ಫೆ. 15 ರಿಂದ ಮೂರನೇ ಟೆಸ್ಟ್ ಆರಂಭವಾಗಲಿದೆ.

ಸಯಾಜಿ ಹೋಟೆಲ್

ಈ ಪಂದ್ಯಕ್ಕಾಗಿ ಭಾರತ ಪ್ರಸಿದ್ಧ ಸಯಾಜಿ ಹೋಟೆಲ್'ನಲ್ಲಿ ತಂಗಿದೆ. ಸಾಕಷ್ಟು ವಿಶೇಷಗಳಿಂದ ಕೂಡಿರುವ ಈ ಹೋಟೆಲ್'ನಲ್ಲಿ ಭಾರತ ಈ ಹಿಂದೆ ಕೂಡ ತಂದಿತ್ತು.

ಹೋಟೆಲ್ ವಿಶೇಷತೆ

ಈ ಹೋಟೆಲ್‌ ಸಾಂಪ್ರದಾಯಿಕ ಗುಜರಾತಿ ಶೈಲಿಯಿಂದ ಕೂಡಿದ್ದು, ಐಷಾರಾಮಿ ಕೊಠಡಿಗಳು ಇಲ್ಲಿವೆ. ಆಟಗಾರರು 10 ದಿನಗಳ ಕಾಲ ಇಲ್ಲಿ ಉಳಿಯಲಿದ್ದಾರೆ.

ರೋಹಿತ್ ಶರ್ಮಾ

ವರದಿಗಳ ಪ್ರಕಾರ, ನಾಯಕ ರೋಹಿತ್ ಶರ್ಮಾ ಅವರಿಗೆ ವಿಶೇಷ ಸೂಟ್ ನೀಡಲಾಗಿದೆ. ಇದು ಪಾಶ್ಚಿಮಾತ್ಯ ಶೈಲಿಯ ಹೊರತಾಗಿ ಸೌರಾಷ್ಟ್ರದ ಪರಂಪರೆ ಮತ್ತು ಸಂಪ್ರದಾಯದಿಂದ ಕೂಡಿವೆಯಂತೆ.

ಬಾಡಿಗೆ ಎಷ್ಟು?

ಈ ಹೋಟೆಲ್‌ನಲ್ಲಿ ಈ ಸೂಟ್‌ಗಳು ಅತ್ಯಂತ ದುಬಾರಿಯಾಗಿದೆ. ಅಲ್ಲಿ ಒಂದು ರಾತ್ರಿಯ ಬಾಡಿಗೆ ರೂ. 17,100. ಇತರೆ ಕೊಠಡಿಗಳ ಬಾಡಿಗೆಯೂ 8,100 ರೂ.

ಆಹಾರ

ಇಲ್ಲಿ ಬೆಳಗಿನ ಉಪಾಹಾರವು ಪ್ರಸಿದ್ಧ ಗುಜರಾತಿ ತಿಂಡಿಗಳಾದ ಫಫ್ಡಾ-ಜಲೇಬಿ, ಖಖಡಾ, ಥೇಪ್ಲಾವನ್ನು ಒಳಗೊಂಡಿರುತ್ತದೆ. ರಾತ್ರಿಯ ಊಟಕ್ಕೆ ಸಾಂಪ್ರದಾಯಿಕ ಕಥಿಯಾವಾಡಿ ಭಕ್ಷ್ಯಗಳನ್ನು ಆಟಗಾರರಿಗೆ ನೀಡಲಾಗುತ್ತದೆ.