ಐಪಿಎಲ್‌ನಲ್ಲಿ 5000ಕ್ಕೂ ಅಧಿಕ ರನ್‌ ಗಳಿಸಿದವರು ಯಾರು ನೋಡಿ

12 February 2024

Author: Vinay Bhat

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಒಟ್ಟು 237 ಐಪಿಎಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 37.25 ಸರಾಸರಿಯಲ್ಲಿ 7263 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್'ನಲ್ಲಿ ಸದ್ಯ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದಾರೆ. ಇವರು 217 ಪಂದ್ಯಗಳಲ್ಲಿ 6617 ರನ್ ಗಳಿಸಿದ್ದಾರೆ.

ಶಿಖರ್ ಧವನ್

ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ 6,000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ವಿದೇಶಿ ಬ್ಯಾಟರ್. ಒಟ್ಟು 176 ಐಪಿಎಲ್ ಪಂದ್ಯಗಳಲ್ಲಿ ಅವರು 6397 ರನ್ ಗಳಿಸಿದ್ದಾರೆ.

ಡೇವಿಡ್ ವಾರ್ನರ್

ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗಾಗಿ ಇದುವರೆಗೆ ಆಡಿರುವ 243 ಐಪಿಎಲ್ ಪಂದ್ಯಗಳಲ್ಲಿ ರೋಹಿತ್ 6211 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ

ಸುರೇಶ್ ರೈನಾ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಜೀವನವನ್ನು 205 ಪಂದ್ಯಗಳಲ್ಲಿ 5528 ರನ್‌ಗಳೊಂದಿಗೆ ಪೂರ್ಣಗೊಳಿಸಿದರು.

ಸುರೇಶ್ ರೈನಾ

ತಮ್ಮ ವೃತ್ತಿಜೀವನದಲ್ಲಿ 184 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ, ಎಬಿ ಡಿವಿಲಿಯರ್ಸ್ ಒಟ್ಟು 5162 ರನ್ ಗಳಿಸಿದ್ದಾರೆ.

ಎಬಿ ಡಿವಿಲಿಯರ್ಸ್

ಇದುವರೆಗೆ 250 ಐಪಿಎಲ್ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ 5082 ರನ್ ಗಳಿಸಿದ್ದಾರೆ.

ಎಂಎಸ್ ಧೋನಿ