03-10-2023

ಭಾರತ-ನೆದರ್ಲೆಂಡ್ಸ್ ಅಭ್ಯಾಸ ಪಂದ್ಯ ನಡೆಯುವುದು ಅನುಮಾನ

ಭಾರತ-ನೆದರ್ಲೆಂಡ್ಸ್

ಭಾರತ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಇಂದು ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಡಲಿದೆ.

ಮಳೆ ಅಡ್ಡಿ

ಭಾರತ-ನೆದರ್ಲೆಂಡ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಇಂದಿನ ಅಭ್ಯಾಸ ಪಂದ್ಯ ಕೂಡ ನಡೆಯುವುದು ಅನುಮಾನ.

ಶೇ. 94 ರಷ್ಟು ಮಳೆ

ಹವಾಮಾನ ವರದಿ ಪ್ರಕಾರ, ಪಂದ್ಯದ ದಿನದಂದು ತಿರುವನಂತಪುರಂನಲ್ಲಿ ಶೇ. 94 ರಷ್ಟು ಮಳೆಯಾಗಲಿದೆ. ಹೆಚ್ಚು ಗಾಳಿ ಬೀಸಲು ಸಾಧ್ಯತೆಗಳಿಲ್ಲದ ಕಾರಣ ಮಳೆ ಹೆಚ್ಚಾಗುತ್ತದೆ.

ತಿರುವನಂತಪುರಂನಲ್ಲಿ ಮಳೆ

ಪ್ರಸ್ತುತ ತಿರುವನಂತಪುರಂನಲ್ಲಿ ಭಾರಿ ಮಳೆಯಾಗುತ್ತಿದ್ದು, ಇಲ್ಲಿ ನಡೆಯಬೇಕಿದ್ದ ಅಭ್ಯಾಸ ಪಂದ್ಯಗಳಲ್ಲಿ ಭಾಗಶಃ ಮಳೆಗಾಹುತಿಯಾಗಿವೆ.

ಎರಡು ಪಂದ್ಯ ರದ್ದು

ಮೊನ್ನೆಯಷ್ಟೆ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಕೂಡ ಆರಂಭವಾಗದೆ ರದ್ದಾಗಿದ್ದರೆ, ಆಸ್ಟ್ರೇಲಿಯಾ-ನೆದರ್ಲೆಂಡ್ಸ್ ಪಂದ್ಯವೂ ಹಾಗೆಯೇ ರದ್ದಾಯಿತು.

ಅ.5ಕ್ಕೆ ಚಾಲನೆ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 5 ರಂದು ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ಮುಖಾಮುಖಿ ಆಗಲಿದೆ.

ಭಾರತ-ಆಸ್ಟ್ರೇಲಿಯಾ

ಭಾರತ ತಂಡ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ICC World Cup: ಉದ್ಘಾಟನಾ ಸಮಾರಂಭಕ್ಕೆ ಮೋದಿ ಸ್ಟೇಡಿಯಂ ರೆಡಿ