ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಶತಕ ಸಿಡಿಸಿದ ಭಾರತೀಯ ಬ್ಯಾಟರ್'ಗಳು
Author: Vinay Bhat
ಸಚಿನ್-ಕೊಹ್ಲಿ
ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾದಲ್ಲಿ ಆಡಿದ 15 ಟೆಸ್ಟ್‌ಗಳಲ್ಲಿ ಐದು ಶತಕಗಳನ್ನು ಗಳಿಸಿದ್ದಾರೆ. ಅಂತೆಯೆ ವಿರಾಟ್ ಕೊಹ್ಲಿ 7 ಟೆಸ್ಟ್ ಪಂದ್ಯಗಳಲ್ಲಿ 2 ಟೆಸ್ಟ್ ಶತಕ ಸಿಡಿಸಿದ್ದಾರೆ.
ವಾಸಿಂ ಜಾಫರ್
ಮಾಜಿ ಆರಂಭಿಕ ಬ್ಯಾಟರ್ ವಾಸಿಂ ಜಾಫರ್ ದಕ್ಷಿಣ ಆಫ್ರಿಕಾದಲ್ಲಿ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿ ಒಂದು ಶತಕವನ್ನು ಗಳಿಸಿದ್ದಾರೆ.
ರಿಷಬ್ ಪಂತ್
ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್‌ಗಳಲ್ಲಿ ರಿಷಬ್ ಪಂತ್ ಒಂದು ಶತಕ ಸಿಡಿಸಿದ್ದಾರೆ.
ಕಪಿಲ್ ದೇವ್
ಲೆಜೆಂಡರಿ ಕಪಿಲ್ ದೇವ್ ದಕ್ಷಿಣ ಆಫ್ರಿಕಾದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಒಂದು ಶತಕವನ್ನು ಗಳಿಸಿದ್ದಾರೆ. ಅವರ ಬೆಸ್ಟ್ ಸ್ಕೋರ್ 129 ಆಗಿತ್ತು.
ಪ್ರವೀಣ್ ಆಮ್ರೆ
ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟರ್ ಪ್ರವೀಣ್ ಆಮ್ರೆ ನವೆಂಬರ್ 13, 1992 ರಂದು ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ 103 ರನ್ ಗಳಿಸಿದರು.
ಕೆಎಲ್ ರಾಹುಲ್
ದಕ್ಷಿಣ ಆಫ್ರಿಕಾದಲ್ಲಿ ಐದು ಟೆಸ್ಟ್‌ಗಳಲ್ಲಿ ಕೆಎಲ್ ರಾಹುಲ್ ಒಂದು ಶತಕ ಗಳಿಸಿದ್ದಾರೆ. ಹಾಗೆಎ ಅಜರುದ್ದೀನ್ ಏಳು ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಗಳಿಸಿದ್ದಾರೆ.
ಸೆಹ್ವಾಗ್-ಪೂಜಾರ
ವೀರೇಂದ್ರ ಸೆಹ್ವಾಗ್ ಅವರು ಆಫ್ರಿಕಾ ವಿರುದ್ಧ 105 ರನ್ ಗಳಿಸಿದ್ದರು. ಪೂಜಾರ 10 ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕ ಸಿಡಿಸಿದ್ದು ಅತ್ಯುತ್ತಮ ಸ್ಕೋರ್ 153 ಆಗಿದೆ.
ರಾಹುಲ್ ದ್ರಾವಿಡ್
ಮಾಜಿ ನಾಯಕ ರಾಹುಲ್ ದ್ರಾವಿಡ್ ದಕ್ಷಿಣ ಆಫ್ರಿಕಾದಲ್ಲಿ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಒಂದು ಶತಕವನ್ನು ಗಳಿಸಿದ್ದಾರೆ.