ಬಾಕ್ಸಿಂಗ್ ಡೇ ಟೆಸ್ಟ್'ನಲ್ಲಿ ಭಾರತವೇ ಬಾಸ್: ಇಲ್ಲಿದೆ ಅಂಕಿಅಂಶ

25 December 2023

Author: Vinay Bhat

ಟೀಮ್ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು 2 ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಿದೆ. ಇದು ಡಿ. 26 ರಿಂದ ಅಂದರೆ ಬಾಕ್ಸಿಂಗ್ ಡೇಯಿಂದ ಪ್ರಾರಂಭವಾಗುತ್ತದೆ.

ದಕ್ಷಿಣ ಆಫ್ರಿಕಾ ಪ್ರವಾಸ

ಕ್ರಿಸ್ಮಸ್ ನಂತರದ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಈ ದಿನದಂದು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯ ಆಡುವ ಸಂಪ್ರದಾಯವಿದೆ. ಇದನ್ನು ಆಫ್ರಿಕಾದಲ್ಲಿಯೂ ಅನುಸರಿಸಲಾಗುತ್ತದೆ.

ಬಾಕ್ಸಿಂಗ್ ಡೇ

ಬಾಕ್ಸಿಂಗ್ ದಿನದಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯವನ್ನು ಆಡಬೇಕಾಗಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಖಚಿತವಾಗಿದೆ.

ಭಾರತ-ಆಫ್ರಿಕಾ

ಇದಕ್ಕೆ ಕಾರಣ ಭಾರತದ ಕೊನೆಯ ಮೂರು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳ ಫಲಿತಾಂಶ. ಕಳೆದ 3 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ.

ಇದೇ ಕಾರಣ

ಭಾರತ 2021 ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡಿತು. ಇದರಲ್ಲಿ ಭಾರತದ 113 ರನ್‌ಗಳಿಂದ ಗೆದ್ದಿತು.

ಆಫ್ರಿಕಾಕ್ಕೆ ಸೋಲು

2020ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ದಿನದಂದು ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಗೆದ್ದಿತು.

ಆಸ್ಟ್ರೇಲಿಯಾ ವಿರುದ್ಧ

ಇದಕ್ಕೂ ಮುನ್ನ 2018ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್'ನಲ್ಲಿ ಆಸ್ಟ್ರೇಲಿಯಾವನ್ನು 137 ರನ್‌ಗಳಿಂದ ಟೀಮ್ ಇಂಡಿಯಾ ಸೋಲಿಸಿತು.

2018 ರಲ್ಲಿ ಗೆಲುವು