22-12-2023
ಕಳೆದ 10 ವರ್ಷಗಳಲ್ಲಿ ಅರ್ಜುನ್ ಪ್ರಶಸ್ತಿಗೆ ಭಾಜನರಾದ ಭಾರತೀಯ ಕ್ರಿಕೆಟಿಗರ ಪಟ್ಟಿ ಇಲ್ಲಿದೆ
Author: ಪೃಥ್ವಿ ಶಂಕರ
ವಿರಾಟ್ ಕೊಹ್ಲಿ 2013 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ರವಿಚಂದ್ರನ್ ಅಶ್ವಿನ್ ಅವರು 2014 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ರೋಹಿತ್ ಶರ್ಮಾ 2015 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ಅಜಿಂಕ್ಯ ರಹಾನೆ 2016 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು.
ಹರ್ಮನ್‌ಪ್ರೀತ್ ಕೌರ್ 2017 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ಚೇತೇಶ್ವರ ಪೂಜಾರ ಅವರು 2017 ರಲ್ಲಿ ಅರ್ಜುನ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಸ್ಮೃತಿ ಮಂಧಾನ ಅವರಿಗೆ 2018 ರಲ್ಲಿ ಅರ್ಜುನ ಪ್ರಶಸ್ತಿ ಒಲಿದು ಬಂದಿತ್ತು.
ರವೀಂದ್ರ ಜಡೇಜಾ 2019 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಪೂನಂ ಯಾದವ್ ಅವರಿಗೆ 2019 ರಲ್ಲಿ ಅರ್ಜುನ ಪ್ರಶಸ್ತಿ ಸಿಕ್ಕಿತ್ತು.
ದೀಪ್ತಿ ಶರ್ಮಾ 2020 ರಲ್ಲಿ ಅರ್ಜುನ್ ಪ್ರಶಸ್ತಿಗೆ ಭಾಜನರಾಗಿದ್ದರು.
ಇಶಾಂತ್ ಶರ್ಮಾ 2020 ರಲ್ಲಿ ಅರ್ಜುನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಶಿಖರ್ ಧವನ್ 2021 ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
ಇದೀಗ ಮೊಹಮ್ಮದ್ ಶಮಿ ಅವರಿಗೆ 2023 ರಲ್ಲಿ ಅರ್ಜುನ್ ಪ್ರಶಸ್ತಿ ನೀಡಲಾಗುವುದು.
NEXT: ಹರಾಜಿನಲ್ಲಿ ದುಬಾರಿ ಬೆಲೆ ಪಡೆದ ಭಾರತದ ಅನ್ಕ್ಯಾಪ್ಡ್ ಆಟಗಾರರಿವರು