ಟೆಸ್ಟ್ ಸರಣಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಭಾರತೀಯರು

25-February-2024

Author: Vinay Bhat

ಟೀಮ್ ಇಂಡಿಯಾದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರು ವೆಸ್ಟ್ ಇಂಡೀಸ್ ವಿರುದ್ಧ 1971 ರ ಟೆಸ್ಟ್ ಸರಣಿಯೊಂದರಲ್ಲಿ 774 ರನ್ ಗಳಿಸಿರುವುದು ಗರಿಷ್ಠ ಸ್ಕೋರ್ ಆಗಿದೆ.

ಸುನಿಲ್ ಗವಾಸ್ಕರ್

1978/79ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಸುನಿಲ್ ಗವಾಸ್ಕರ್ 732 ರನ್ ಸಿಡಿಸಿದ್ದರು.

ಸುನಿಲ್ ಗವಾಸ್ಕರ್

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 2014/15ರ ಟೆಸ್ಟ್ ಸರಣಿಯಲ್ಲಿ 692 ರನ್ ಗಳಿಸಿದ್ದರು.

ವಿರಾಟ್ ಕೊಹ್ಲಿ

2016/17ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ 655 ರನ್ ಸಿಡಿಸಿದ್ದರು. ಹಾಗೆಯೆ 2017ರಲ್ಲಿ ಲಂಕಾ ವಿರುದ್ಧ 610 ರನ್ ಕೂಡ ಸಿಡಿಸಿದ್ದರು.

ವಿರಾಟ್ ಕೊಹ್ಲಿ

ದಿಲೀಪ್ ಸರ್ದೇಸಾಯಿ 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 642 ರನ್ ಗಳಿಸಿದ ಸಾಧನೆ ಮಾಡಿದ್ದರು.

ದಿಲೀಪ್ ಸರ್ದೇಸಾಯಿ

ಸದ್ಯ ಟೀಮ್ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು 2003/04ರ ಆಸ್ಟ್ರೇಲಿಯಾ ಪ್ರವಾಸದಲ್ಲಿ 619 ರನ್ ಸಿಡಿಸಿದ್ದರು.

ರಾಹುಲ್ ದ್ರಾವಿಡ್

ಯಶಸ್ವಿ ಜೈಸ್ವಾಲ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 618 ರನ್ ಗಳಿಸಿದ್ದಾರೆ. ಈ ಸರಣಿಯಲ್ಲಿ ಇನ್ನೂ 1 ಟೆಸ್ಟ್ ಬಾಕಿ ಉಳಿದಿದೆ.

ಯಶಸ್ವಿ ಜೈಸ್ವಾಲ್