25-02-2024

LIVE ಪಂದ್ಯದ ಮಧ್ಯೆ ಅಭಿಮಾನಿಗೆ ಹೊಡೆಯಲು ಮುಂದಾದ ಬಾಬರ್ ಅಝಂ

Author: Vinay Bhat

ಪಾಕ್ ಸೂಪರ್ ಲೀಗ್

ಪಾಕಿಸ್ತಾನದಲ್ಲಿ ಸದ್ಯ ಪಾಕಿಸ್ತಾನ ಸೂಪರ್ ಲೀಗ್‌ ಟೂರ್ನಿ ನಡೆಯುತ್ತಿದೆ. ಪ್ರತಿ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಇದರಲ್ಲಿ ಬಾಬರ್ ಅಝಂ ಕೂಡ ಆಟವಾಡುತ್ತಿದ್ದಾರೆ.

ಬಾಬರ್ ಜಗಳ

ಈ ಮಧ್ಯೆ, ಪಾಕಿಸ್ತಾನದ ದಂತಕಥೆ ಬಾಬರ್ ಅಝಂ ಅಭಿಮಾನಿಯೊಂದಿಗೆ ಜಗಳವಾಡಿದ ಘಟನೆ ನಡೆದಿದೆ. ಅದುಕೂಡ ಪಂದ್ಯ ನಡೆಯುತ್ತಿರುವಾಗಲೇ.

ಬಾಬರ್ ವಿರುದ್ಧ ಘೋಷಣೆ

ಬಾಬರ್ ಅವರು ಪಂದ್ಯದ ವೇಳೆ ಬೌಂಡರಿ ಬಳಿ ಕುಳಿತಿದ್ದರು. ಅದೇ ಸಮಯದಲ್ಲಿ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಕೆಲ ಫ್ಯಾನ್ಸ್ ಅವರ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದ್ದಾರೆ.

ಜಿಂಬಾಬರ್

ಬಾಬರ್ ಅಝಂ ಪಂದ್ಯದ ಸಮಯದಲ್ಲಿ ಬೌಂಡರಿ ಬಳಿ ಕೆಲವು ಸಹ ಆಟಗಾರರೊಂದಿಗೆ ಕುಳಿತಿದ್ದಾಗ ಅಭಿಮಾನಿಗಳು ಜಿಂಬಾಬರ್ ಎಂದು ಕೂಗಲಾರಂಭಿಸಿದ್ದಾರೆ.

ಕೋಪಗೊಂಡ ಬಾಬರ್

ಜಿಂಬಾಬರ್ ಕೂಗು ಕೇಳಿದ ಕೂಡಲೇ ಬಾಬರ್ ಕೋಪಗೊಂಡಿದ್ದು, ಅಭಿಮಾನಿಯನ್ನು 'ಇಲ್ಲಿಗೆ ಬಾ...' ಎಂದು ಕೈ ಸನ್ನೆ ಮಾಡಿ ಬಾಟಲಿಯಲ್ಲಿ ಹೊಡೆಯಲು ಮುಂದಾಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಜಿಂಬಾಬರ್ ಎಂದರೇನು?

ಇತ್ತೀಚಿನ ವರ್ಷಗಳಲ್ಲಿ ಬಾಬರ್ ದೊಡ್ಡ ತಂಡಗಳ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಕಾರಣ ಜಿಂಬಾಬರ್ ಎಂದು ಕರೆಯುತ್ತಾರೆ. ಯಾಕೆಂದರೆ ಜಿಂಬಾಬ್ವೆ ವಿರುದ್ಧ ಮಾತ್ರ ಬಾಬರ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.

ಬಾಬರ್-ಜಿಂಬಾಬ್ಬೆ

ಜಿಂಬಾಬ್ವೆ ವಿರುದ್ಧ ಆಡಿರುವ 18 ಪಂದ್ಯಗಳಲ್ಲಿ ಬಾಬರ್ 57.75 ಸರಾಸರಿಯಲ್ಲಿ 693 ರನ್ ಗಳಿಸಿದ್ದಾರೆ. ಹೀಗಾಗಿ ಇವರು ದುರ್ಬಲ ಎದುರಾಳಿಗಳ ವಿರುದ್ಧ ಮಾತ್ರ ರನ್ ಗಳಿಸುತ್ತಾರೆ ಎನ್ನುತ್ತಿದ್ದಾರೆ ಫ್ಯಾನ್ಸ್.

ಕಳಪೆ ಫಾರ್ಮ್

ಬಾಬರ್ ಅವರು ಬಹಳ ದಿನಗಳಿಂದ ಉತ್ತಮ ಪ್ರದರ್ಶನ ನೀಡಲು ಪರದಾಡುತ್ತಿದ್ದಾರೆ. ಅವರು ವಿಶ್ವಕಪ್ ನಂತರ ಕೆಟ್ಟ ಫಾರ್ಮ್‌ನಲ್ಲಿದ್ದು, ಸಾಕಷ್ಟು ಟೀಕೆಗಳಿಗೆ ಒಳಗಾಗಿದ್ದಾರೆ.