16-03-2024

ಒಂದು ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ 5 ಆಟಗಾರರು

Author: Vinay Bhat

ವಿರಾಟ್ ಕೊಹ್ಲಿ

ಐಪಿಎಲ್ 2016ರಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ಪರ 4 ಶತಕ ಸಿಡಿಸಿದ್ದರು. ಇಲ್ಲಿ ಅವರು 973 ರನ್'ಗಳನ್ನು ಸಿಡಿಸಿದರು. ಇದು ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ದಾಖಲೆ ಆಗಿದೆ.

ಜೋಸ್ ಬಟ್ಲರ್

ಜೋಸ್ ಬಟ್ಲರ್ ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 4 ಶತಕಗಳನ್ನು ಸಿಡಿಸಿದ್ದಾರೆ. 16 ಪಂದ್ಯಗಳಿಗೆ 863 ರನ್ ಗಳಿಸಿ ಆ ಋತುವಿನ ಆರೆಂಜ್ ಕ್ಯಾಪ್ ಗೆದ್ದಿದ್ದರು.

ಶುಭ್​ಮನ್ ಗಿಲ್

2023ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ಆಡಿದ ಪರ ಶುಭ್​ಮನ್ ಗಿಲ್ 3 ಶತಕ ಸಿಡಿಸಿದ್ದರು.

ಶುಭ್​ಮನ್ ಗಿಲ್

ಶುಭ್​ಮನ್ ಗಿಲ್ ಐಪಿಎಲ್ 2023 ರಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದರು. ಒಟ್ಟು 851 ರನ್ ಗಳಿಸಿದರು ಮತ್ತು ಆ ಸೀಸನ್ ಆರೆಂಜ್ ಕ್ಯಾಪ್ ಗೆದ್ದರು.

ಕ್ರಿಸ್ ಗೇಲ್

ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಐಪಿಎಲ್ 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 2 ಶತಕ ಸಿಡಿಸಿದ್ದರು.

ಕ್ರಿಸ್ ಗೇಲ್

ಕ್ರಿಸ್ ಗೇಲ್ ಅವರನ್ನು ಐಪಿಎಲ್ 2011 ರಲ್ಲಿ RCB ಬದಲಿ ಆಟಗಾರನಾಗಿ ಕರೆತರಲಾಯಿತು, ಅವರು ಆ ಋತುವಿನಲ್ಲಿ 603 ರನ್ ಗಳಿಸಿದರು.

ಹಾಶಿಮ್ ಆಮ್ಲ

ಐಪಿಎಲ್ 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ ಹಶೀಮ್ ಆಮ್ಲಾ 2 ಶತಕ ಸಿಡಿಸಿದ್ದರು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಒಂದೇ ಐಪಿಎಲ್ ಸೀಸನ್‌ನ ಇತಿಹಾಸದಲ್ಲಿ ಎರಡು ಬಾರಿ 1 ಶತಕ ಸಿಡಿಸಿದ ಏಕೈಕ ಬ್ಯಾಟರ್. ಅವರು ಐಪಿಎಲ್ 2023 ರಲ್ಲಿ 2 ಶತಕಗಳನ್ನು ಬಾರಿಸಿದರು.