ಇದೇ ಮೊದಲ ಬಾರಿ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್ ಆಟಗಾರರು

15-March-2024

Author: Vinay Bhat

ರಚಿನ್ ರವೀಂದ್ರ ಅವರು ಐಪಿಎಲ್ 2024 ರಲ್ಲಿ ಸಿಎಸ್‌ಕೆ ಪರ ಆಡಲಿದ್ದಾರೆ. ಐಪಿಎಲ್ 2024 ರ ಹರಾಜಿನಲ್ಲಿ ಅವರು ರೂ 1.80 ಕೋಟಿಗೆ ಧೋನಿ ತಂಡಕ್ಕೆ ಸಹಿ ಹಾಕಿದರು.

ರಚಿನ್ ರವೀಂದ್ರ

2023 ರ ODI ವಿಶ್ವಕಪ್‌ನಲ್ಲಿ 20 ವಿಕೆಟ್‌ಗಳನ್ನು ಪಡೆದ ನಂತರ, ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್ ಕೋಟ್ಜಿ ಐಪಿಎಲ್ 2024ರಲ್ಲಿ 5 ಕೋಟಿಗೆ ಮುಂಬೈ ಪಾಲಾದರು.

ಜೆರಾಲ್ಡ್ ಕೋಟ್ಜಿ

ಐಪಿಎಲ್ 2024 ಗಾಗಿ ಆಸ್ಟ್ರೇಲಿಯಾದ ವೇಗಿ ಸ್ಪೆನ್ಸರ್ ಜಾನ್ಸನ್ ಅವರ ಸೇವೆಯನ್ನು ಪಡೆಯಲು ಗುಜರಾತ್ ಟೈಟಾನ್ಸ್ 10 ಕೋಟಿ ರೂ. ನೀಡಿತು.

ಸ್ಪೆನ್ಸರ್ ಜಾನ್ಸನ್

ಶ್ರೀಲಂಕಾದ ನುವಾನ್ ತುಷಾರ ಅವರು ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಅವರು ರೂ. 4.80 ಕೋಟಿಗೆ ಸಹಿ ಹಾಕಿದರು.

ನುವಾನ್ ತುಷಾರ

ಮಾರ್ಕ್ ವುಡ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ವೆಸ್ಟ್ ಇಂಡೀಸ್ ವೇಗಿ ಶಮರ್ ಜೋಸೆಫ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಶಮರ್ ಜೋಸೆಫ್

2023ರ ಏಕದಿನ ವಿಶ್ವಕಪ್‌ನಲ್ಲಿ ದಿಲ್ಶನ್ ಮಧುಶಂಕ 21 ವಿಕೆಟ್‌ಗಳನ್ನು ಪಡೆದಿದ್ದರು. ಐಪಿಎಲ್ 2024 ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 4.60 ಕೋಟಿಗೆ ಖರೀದಿಸಿತು.

ದಿಲ್ಶನ್ ಮಧುಶಂಕ

ಐಪಿಎಲ್ 2024 ರ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ನಾಂದ್ರೆ ಬರ್ಗರ್ ಅವರನ್ನು ರಾಜಸ್ಥಾನ್ ರಾಯಲ್ಸ್ 50 ಲಕ್ಷಕ್ಕೆ ಸಹಿ ಹಾಕಿದೆ.

ನಾಂದ್ರೆ ಬರ್ಗರ್

ODI ವರ್ಲ್ಡ್ ಕಪ್ 2023 ರಲ್ಲಿ ಆಲ್-ರೌಂಡ್ ಪ್ರದರ್ಶನ ತೋರಿದ ಈ ಅಫ್ಘಾನ್ ಆಟಗಾರ, ಐಪಿಎಲ್ 2024 ಹರಾಜಿನಲ್ಲಿ ರೂ. 50 ಲಕ್ಷಕ್ಕೆ ಗುಜರಾತ್ ಸೇರಿದರು.

ಅಜ್ಮತುಲ್ಲಾ ಒಮರ್ಜಾಯ್

ಐಪಿಎಲ್ 2024 ರ ಹರಾಜಿನಲ್ಲಿ ಉತ್ತರ ಪ್ರದೇಶದ ಬ್ಯಾಟರ್ ಸಮೀರ್ ರಿಜ್ವಿ ಅವರನ್ನು 8.40 ಕೋಟಿ ರೂ. ಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತು.

ಸಮೀರ್ ರಿಜ್ವಿ