ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ 10 ತಂಡಗಳು ಖರೀದಿಸಬೇಕಾದ ಆಟಗಾರರೆಷ್ಟು ಗೊತ್ತಾ?

27 November 2023

ಐಪಿಎಲ್ ನಿಯಮದ ಪ್ರಕಾರ ಎಲ್ಲಾ ತಂಡಗಳು ತಮ್ಮ ತಂಡದಲ್ಲಿ ಕನಿಷ್ಠ 18 ಮತ್ತು ಗರಿಷ್ಠ 25 ಆಟಗಾರರನ್ನು ಹೊಂದಿರಬಹುದು.

ಕೆಕೆಆರ್ ತಂಡ ಪ್ರಸ್ತುತ ಕೇವಲ 13 ಆಟಗಾರರನ್ನು ಹೊಂದಿದ್ದು, ತಂಡ ಇನ್ನೂ 12 ಆಟಗಾರರನ್ನು ಖರೀದಿಸಬೇಕಾಗುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈಗ 19 ಆಟಗಾರರಿದ್ದು, ಕೇವಲ 6 ಸ್ಲಾಟ್‌ಗಳು ಮಾತ್ರ ಖಾಲಿ ಉಳಿದಿವೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 16 ಆಟಗಾರರಿದ್ದು, ಭರ್ತಿ ಮಾಡಲು 9 ಆಟಗಾರರು ಬೇಕಾಗಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡದಲ್ಲಿ ಸದ್ಯ 17 ಆಟಗಾರರಿದ್ದು, ಎಂಟು ಸ್ಲಾಟ್​ಗಳು ಮಾತ್ರ ಖಾಲಿ ಇವೆ.

ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡದಲ್ಲಿ ಪ್ರಸ್ತುತ 19 ಆಟಗಾರರಿದ್ದು, ಕೇವಲ 6 ಆಟಗಾರರು ಮಾತ್ರ ಖರೀದಿಸಬೇಕಾಗಿದೆ

ಮುಂಬೈ ಇಂಡಿಯನ್ಸ್ ಪ್ರಸ್ತುತ 17 ಆಟಗಾರರನ್ನು ಹೊಂದಿದ್ದು, ಇನ್ನೂ 8 ಆಟಗಾರರನ್ನು ಖರೀದಿಸಬೇಕಾಗಿದೆ.

ಪಂಜಾಬ್ ಕಿಂಗ್ಸ್ ಕೂಡ ಕೇವಲ 17 ಆಟಗಾರರನ್ನು ತಮ್ಮಲ್ಲಿ ಉಳಿಸಿಕೊಂಡಿದ್ದು, 8 ಆಟಗಾರರನ್ನು ಖರೀದಿಸಬೇಕಾಗಿದೆ.

ಆರ್​ಸಿಬಿ 19 ಆಟಗಾರರನ್ನು ಉಳಿಸಿಕೊಂಡಿದೆ. ಹೀಗಾಗಿ ತಂಡಕ್ಕೆ ಇನ್ನೂ ಆರು ಆಟಗಾರರು ಮಾತ್ರ ಅಗತ್ಯವಿದೆ.

ರಾಜಸ್ಥಾನ್ ರಾಯಲ್ಸ್ ಈಗಾಗಲೇ 17 ಆಟಗಾರರನ್ನು ಹೊಂದಿದೆ. ಹೀಗಾಗಿ ತಂಡಕ್ಕೆ ಕೇವಲ 8 ಆಟಗಾರರ ಅಗತ್ಯವಿದೆ.

ಸನ್‌ರೈಸರ್ಸ್ ಹೈದರಾಬಾದ್ ಬಳಿ 19 ಆಟಗಾರರಿದ್ದು, ಗರಿಷ್ಠ 6 ಆಟಗಾರರನ್ನು ಖರೀದಿಸಬಹುದಾಗಿದೆ.