05-12-2023

IPL 2024: ಇವರು ಹರಾಜಾಗುವುದು ಡೌಟ್..!

Author- ZAHIR

1166 ಆಟಗಾರರು:

ಈ ಬಾರಿಯ ಐಪಿಎಲ್​ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೀಡಿದ್ದಾರೆ. ಇದರಲ್ಲಿ 830 ಭಾರತೀಯ ಹಾಗೂ 336 ವಿದೇಶಿ ಆಟಗಾರರಿದ್ದಾರೆ.

ಹರಾಜಾಗುವುದು ಡೌಟ್:

ಈ 830 ಭಾರತೀಯ ಆಟಗಾರರಲ್ಲಿ ಕೆಲವರಿಗೆ ಐಪಿಎಲ್ ಫ್ರಾಂಚೈಸ್​ಗಳು ಮಣೆ ಹಾಕುವುದು ಅನುಮಾನ. ಏಕೆಂದರೆ ಈ ಆಟಗಾರರು ಈಗಾಗಲೇ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ.

ಮೂಲಬೆಲೆ ಹೆಚ್ಚು:

ಇಲ್ಲಿ ಕೆಲ ಆಟಗಾರರು ಕಳಪೆ ಪ್ರದರ್ಶನ ನೀಡಿದ ನಿದರ್ಶನಗಳಿದ್ದರೆ, ಮತ್ತೆ ಕೆಲ ಪ್ಲೇಯರ್ಸ್ ಅಧಿಕ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಆಟಗಾರರು ಹರಾಜಾಗುವುದು ಅನುಮಾನ...

1- ಕೇದರ್ ಜಾಧವ್:

ಕೇದರ್ ಜಾಧವ್ ಈ ಬಾರಿಯ ಹರಾಜಿಗಾಗಿ ಘೋಷಿಸಿರುವ ಮೂಲ ಬೆಲೆ 2 ಕೋಟಿ ರೂ. ಕಳೆದ ಸೀಸನ್​ ಹರಾಜಿನಲ್ಲಿ 1 ಕೋಟಿ ಬೇಸ್ ಪ್ರೈಸ್​ ಹೊಂದಿದ್ದರೂ ಅವರನ್ನು ಯಾವುದೇ ಫ್ರಾಂಚೈಸ್ ಖರೀದಿಸಿರಲಿಲ್ಲ.

2- ಹನುಮ ವಿಹಾರಿ:

ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಬ್ರ್ಯಾಂಡ್ ಆಗಿರುವ ಹನುಮ ವಿಹಾರಿ ಕೂಡ ಈ ಬಾರಿಯ ಹರಾಜಿಗೆ ಹೆಸರು ನೀಡಿದ್ದಾರೆ. 50 ಲಕ್ಷ ರೂ. ಮೂಲ ಬೆಲೆ ಹೊಂದಿರುವ ವಿಹಾರಿ ಅನ್​ಸೋಲ್ಡ್ ಆಗುವ ಸಾಧ್ಯತೆಯಿದೆ.

3- ವರುಣ್ ಆರೋನ್:

ವೇಗದ ಬೌಲರ್ ವರುಣ್ ಆರೋನ್ ಈ ಬಾರಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಅವರ ಖರೀದಿಗೆ ಫ್ರಾಂಚೈಸ್​ಗಳು ಮುಂದೆ ಬರುವುದು ಡೌಟ್.

4- ಶಹಬಾಝ್ ನದೀಮ್:

ಕಳೆದ 2 ವರ್ಷಗಳಿಂದ ಯಾವುದೇ ಐಪಿಎಲ್ ಪಂದ್ಯವಾಡದ ಶಹಬಾಝ್ ನದೀಮ್ ಈ ಬಾರಿ ಕೂಡ ಹೆಸರು ನೀಡಿದ್ದಾರೆ. ಆದರೆ ಅವರ ಖರೀದಿಗೆ ಯಾವುದೇ ಫ್ರಾಂಚೈಸ್ ಆಸಕ್ತಿವಹಿಸುವ ಸಾಧ್ಯತೆಯಿಲ್ಲ.

5- ಧವಳ್ ಕುಲಕರ್ಣಿ:

2021 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಧವಳ್ ಕುಲಕರ್ಣಿ ಆ ಬಳಿಕ ಯಾವುದೇ ಪಂದ್ಯವಾಡಿಲ್ಲ. ಇದೀಗ ಐಪಿಎಲ್ ಹರಾಜಿಗೆ ಹೆಸರು ನೀಡಿರುವ ಅವರು ಕೂಡ ಅನ್​ಸೋಲ್ಡ್ ಆಗುವ ಸಾಧ್ಯತೆಯಿದೆ.