05-12-2023

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಹತ್ವದ ಬದಲಾವಣೆ..!

Author: ಪೃಥ್ವಿ ಶಂಕರ

ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೀಗ ಎಲ್ಲರ ಕಣ್ಣು ಅದರತ್ತ ನೆಟ್ಟಿದೆ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ 700 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಈ ಬಾರಿಯ ಐಪಿಎಲ್ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದ್ದು, ದೇಶದ ಹೊರಗೆ ಹರಾಜು ನಡೆಯುತ್ತಿರುವುದು ಇದೇ ಮೊದಲು.

ಈ ಬಾರಿ ಹರಾಜಿನಲ್ಲಿ ಮತ್ತೊಂದು ದೊಡ್ಡ ಬದಲಾವಣೆಯಾಗಲಿದ್ದು, ಹರಾಜುದಾರರೂ ಬದಲಾಗುತ್ತಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಕಲಾ ಸಂಗ್ರಾಹಕಿ ಮಲ್ಲಿಕಾ ಸಾಗರ್ ಈ ಬಾರಿ ಐಪಿಎಲ್ 2024 ರ ಹರಾಜು ನಡೆಸಿಕೊಡಲಿದ್ದಾರೆ.

ಇದಕ್ಕೂ ಮೊದಲು ಮಲ್ಲಿಕಾ ಮಹಿಳಾ ಪ್ರೀಮಿಯರ್ ಲೀಗ್‌, ಪ್ರೊ-ಕಬಡ್ಡಿ ಲೀಗ್ ಸೇರಿದಂತೆ ಹಲವು ಕಲಾ ಕಾರ್ಯಕ್ರಮಗಳಲ್ಲಿ ಹರಾಜುದಾರರಾಗಿ ಕೆಲಸ ಮಾಡಿದ್ದಾರೆ

ಐಪಿಎಲ್​ನಲ್ಲಿ 2018 ರಿಂದ ಇಲ್ಲಿಯವರೆಗೆ, ಹಗ್ ಎಡ್ಮೀಡ್ಸ್ ಹರಾಜು ನಡೆಸಿಕೊಟ್ಟಿದ್ದರು. ಅವರಿಗಿಂತ ಮೊದಲು ರಿಚರ್ಡ್ ಮ್ಯಾಡ್ಲಿ ಈ ಕೆಲಸ ನಿರ್ವಹಿಸಿದ್ದರು.