ಒಂದು ಪಂದ್ಯಕ್ಕೆ ಭಾರತ- ಆಫ್ರಿಕಾ ಆಟಗಾರರು ಪಡೆಯುವ ಸಂಬಳ ಎಷ್ಟು ಗೊತ್ತಾ?
Author: ಪೃಥ್ವಿ ಶಂಕರ
ಭಾರತ ತಂಡ ಇದೇ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದು, ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ, ಟಿ20 ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ.
ಎರಡೂ ದೇಶಗಳಲ್ಲಿಯೂ ಕ್ರಿಕೆಟ್ಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಉಭಯ ತಂಡಗಳ ಕ್ರಿಕೆಟಿಗರ ವೇತನವನ್ನು ಗಮನಿಸಿದರೆ ಅದರಲ್ಲಿ ಸಾಕಷ್ಟು ವ್ಯತ್ಯಾಸವಿದೆ.
2023 ರಲ್ಲಿ ಬಿಸಿಸಿಐ ಬಿಡುಗಡೆ ಮಾಡಿದ ವೇತನ ರಚನೆಯ ಪ್ರಕಾರ, ಪ್ಲೇಯಿಂಗ್ 11ನಲ್ಲಿರುವ ಭಾರತೀಯ ಆಟಗಾರರಾಗಿಗೆ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನ ಪಂದ್ಯಕ್ಕೆ ರೂ. 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ ರೂ. 3 ಲಕ್ಷ ವೇತನ ನೀಡಲಾಗುತ್ತದೆ.
ಅಲ್ಲದೆ ಪ್ಲೇಯಿಂಗ್ ಇಲವೆನ್ನಲ್ಲಿ ಇಲ್ಲದ ಆಟಗಾರರು ಟೆಸ್ಟ್ ಪಂದ್ಯಕ್ಕೆ 7.5 ಲಕ್ಷ, ಏಕದಿನಕ್ಕೆ 3 ಲಕ್ಷ ಮತ್ತು ಟಿ20 ಪಂದ್ಯಕ್ಕೆ 1.5 ಲಕ್ಷ ರೂ ವೇತನ ಪಡೆಯುತ್ತಾರೆ.
ಇನ್ನು ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಸಂಬಳವನ್ನು ನೋಡಿದರೆ, ಅವರು ಟೆಸ್ಟ್ ಪಂದ್ಯಕ್ಕೆ ಸುಮಾರು 3 ಲಕ್ಷ 75 ಸಾವಿರ ರೂ. ಏಕದಿನ ಪಂದ್ಯಕ್ಕೆ 1 ಲಕ್ಷ ರೂ. ಹಾಗೂ ಟಿ20 ಪಂದ್ಯಕ್ಕೆ 66 ಸಾವಿರ ರೂ. ವೇತನ ಪಡೆಯುತ್ತಾರೆ.
ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ನಾಲ್ಕು ಟೆಸ್ಟ್ ಪಂದ್ಯಗಳಿಂದ ಪಡೆಯುವ ವೇತನವನ್ನು ಭಾರತೀಯ ಕ್ರಿಕೆಟಿಗರು ಕೇವಲ ಒಂದು ಪಂದ್ಯದಲ್ಲಿ ಗಳಿಸುತ್ತಾರೆ.
ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ನಾಲ್ಕು ಟೆಸ್ಟ್ ಪಂದ್ಯಗಳಿಗೆ ಅಂದಾಜು 15 ಲಕ್ಷ ರೂ. ವೇತನ ಪಡೆಯುತ್ತಾರೆ.
ಆದರೆ ಟೀಂ ಇಂಡಿಯಾ ಆಟಗಾರರು ಕೇವಲ 1 ಪಂದ್ಯಕ್ಕೆ 15 ಲಕ್ಷ ರೂ. ವೇತನ ಪಡೆಯುತ್ತಾರೆ.