30-01-2024

ಐಪಿಎಲ್​ನಲ್ಲಿ ಧೋನಿಗಿಂತ ಅಧಿಕ ರನ್ ಗಳಿಸಿದ ಬ್ಯಾಟರ್ಸ್ ಯಾರು ನೋಡಿ

Author: Vinay Bhat

ಎಂಎಸ್ ಧೋನಿ

ಧೋನಿ ಐಪಿಎಲ್ ಇತಿಹಾಸದಲ್ಲಿ ಏಳನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇವರು 250 ಪಂದ್ಯಗಳಲ್ಲಿ 5082 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

237 ಪಂದ್ಯಗಳಲ್ಲಿ 7263 ರನ್ ಗಳಿಸಿರುವ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 7000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟರ್ ಇವರಾಗಿದ್ದಾರೆ.

ವಿರಾಟ್ ಕೊಹ್ಲಿ

ಕೊಹ್ಲಿ ಅವರ ಖಾತೆಯಲ್ಲಿ ಏಳು ಶತಕಗಳು ಮತ್ತು 50 ಅರ್ಧ ಶತಕಗಳು ಸೇರಿವೆ. ಐಪಿಎಲ್ 2013 ರಿಂದ 2021 ರವರೆಗೆ RCB ಗೆ ನಾಯಕರಾಗಿದ್ದರು.

ಶಿಖರ್ ಧವನ್

ಧವನ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ. ಆರಂಭಿಕ ಬ್ಯಾಟರ್ 217 ಪಂದ್ಯಗಳಲ್ಲಿ 6617 ರನ್ ಗಳಿಸಿದ್ದಾರೆ.

ಡೇವಿಡ್ ವಾರ್ನರ್

ಧೋನಿಗಿಂತಲೂ ಹೆಚ್ಚು ಐಪಿಎಲ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಮೂರನೇ ಸ್ಥಾನದಲ್ಲಿದ್ದಾರೆ 176 ಪಂದ್ಯಗಳಲ್ಲಿ 6397 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಇವರು 243 ಪಂದ್ಯಗಳಲ್ಲಿ 6211 ರನ್ ಗಳಿಸಿದ್ದಾರೆ.

ಸುರೇಶ್ ರೈನಾ

ರೈನಾ ಐದನೇ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಐಪಿಎಲ್ ವೃತ್ತಿಜೀವನವನ್ನು 5528 ರನ್'ಗಳೊಂದಿಗೆ ಮುಗಿಸಿದರು. CSK ಐಪಿಎಲ್ 2022 ಮೆಗಾ-ಹರಾಜಿನ ಮೊದಲು ಇವರನ್ನು ಬಿಡುಗಡೆ ಮಾಡಿತು.

ಎಬಿ ಡಿವಿಲಿಯರ್ಸ್

5162 ರನ್‌ಗಳೊಂದಿಗೆ ಎಬಿ ಡಿವಿಲಿಯರ್ಸ್ ಎಂಎಸ್ ಧೋನಿಗಿಂತ ಸ್ವಲ್ಪ ಮುಂದಿದ್ದಾರೆ. ಐಪಿಎಲ್ ಲೆಜೆಂಡ್ ಐಪಿಎಲ್ 2021 ರ ನಂತರ T20 ಲೀಗ್‌ನಿಂದ ಹಿಂದೆ ಸರಿದರು.