21-05-2024

ಇನ್ಸ್ಟಾಗ್ರಾಮ್​ನಲ್ಲಿ ದಾಖಲೆ ಬರೆದ ಚೆನ್ನೈ ಸೂಪರ್ ಕಿಂಗ್ಸ್

Author: ಪೃಥ್ವಿ ಶಂಕರ

17ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಯಣ ಲೀಗ್ ಹಂತದಲ್ಲೇ ಅಂತ್ಯಗೊಂಡಿತು.

ಐಪಿಎಲ್​ನಲ್ಲಿ ದಾಖಲೆಯ 5 ಬಾರಿ ಚಾಂಪಿಯನ್ ಆಗಿರುವ ಈ ತಂಡಕ್ಕೆ ಪ್ರಪಂಚದಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಅಭಿಮಾನಿಗಳ ದಂಡೇ ನೆರೆದಿತ್ತು.

ಇದಕ್ಕೆ ಉದಾಹರಣೆಯಾಗಿ ಇದೀಗ ಈ ತಂಡ ಇನ್ಸ್ಟಾಗ್ರಾಮ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿರುವ ತಂಡ ಎಂಬ ದಾಖಲೆ ಬರೆದಿದೆ.

ವಾಸ್ತವವಾಗಿ, ಚೆನ್ನೈ ಸೂಪರ್ ಕಿಂಗ್ಸ್ ಇನ್ಸ್ಟಾಗ್ರಾಮ್​ನಲ್ಲಿ 16 ಮಿಲಿಯನ್ ಅಂದರೆ 1.6 ಕೋಟಿ ಅನುಯಾಯಿಗಳನ್ನು ಹೊಂದಿದೆ. ಸಿಎಸ್‌ಕೆಯೊಂದಿಗೆ ಬೇರೆ ಯಾವುದೇ ತಂಡ ಸ್ಪರ್ಧೆಯಲ್ಲಿಲ್ಲ.

ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 14.7 ಮಿಲಿಯನ್ ಅಂದರೆ 1.47 ಕೋಟಿ ಅನುಯಾಯಿಗಳನ್ನು ಹೊಂದಿದೆ.

ಮುಂಬೈ ಇಂಡಿಯನ್ಸ್ 13.9 ಮಿಲಿಯನ್ ಅಂದರೆ 1.39 ಕೋಟಿ ಅನುಯಾಯಿಗಳನ್ನು ಹೊಂದಿದೆ.

ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 6 ಮಿಲಿಯನ್ ಅಂದರೆ 60 ಲಕ್ಷ ಫಾಲೋವರ್ಸ್​ ಹೊಂದಿದೆ.

4.4 ಮಿಲಿಯನ್ ಫಾಲೋವರ್ಸ್​ ಹೊಂದಿರುವ ರಾಜಸ್ಥಾನ್ ರಾಯಲ್ಸ್ ಐದನೇ ಸ್ಥಾನದಲ್ಲಿದೆ.