ಐಪಿಎಲ್​ನಲ್ಲಿ ಈವರೆಗೆ ಟ್ರೋಫಿ ಗೆಲ್ಲದ 7 ತಂಡಗಳು ಯಾವುವು ಗೊತ್ತೇ?

12-March-2024

Author: Vinay Bhat

ರಾಯಲ್ ಚಾಲೆಂಜರ್ಸ್ ಬೆಂಗಳೂರು 2008 ರಲ್ಲಿ ಪ್ರಾರಂಭವಾದ IPL ರಿಂದ ಅಸ್ತಿತ್ವದಲ್ಲಿರುವ ಮೂರು ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಇದು ಈವರೆಗೆ ಟ್ರೋಫಿ ಗೆದ್ದಿಲ್ಲ.

RCB

ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದೆಯೇ RCB IPL ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ತಲುಪಿದೆ. 2009, 2011 ಮತ್ತು 2016 ರಲ್ಲಿ ಮೂರು ಬಾರಿ ಫೈನಲ್ ಏರಿತ್ತು.

ಐಪಿಎಲ್ ಫೈನಲ್

ಪಂಜಾಬ್ ಕಿಂಗ್ಸ್ 2008 ರಲ್ಲಿ ಐಪಿಎಲ್‌ ನಂತರ ಟ್ರೋಫಿಯನ್ನು ಗೆಲ್ಲದ ಮೂರು ಫ್ರಾಂಚೈಸಿಗಳಲ್ಲಿ ಒಂದಾಗಿದೆ. 2014 ರಲ್ಲಿ ಒಮ್ಮೆ ಫೈನಲ್‌ಗೆ ಅರ್ಹತೆ ಪಡೆದಿತ್ತು.

ಪಂಜಾಬ್ ಕಿಂಗ್ಸ್

ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈವರೆಗೆ ಐಪಿಎಲ್ ಗೆದ್ದಿಲ್ಲ. 2020 ರ ಆವೃತ್ತಿಯಲ್ಲಿ ಒಮ್ಮೆ ಮಾತ್ರ ಐಪಿಎಲ್‌ ಫೈನಲ್'ಗೆ ಅರ್ಹತೆ ಪಡೆದಿದೆ.

ದೆಹಲಿ ಕ್ಯಾಪಿಟಲ್ಸ್

ಐಪಿಎಲ್ 2022 ರ ಋತುವಿನಲ್ಲಿ ಚೊಚ್ಚಲ ಪ್ರವೇಶ ಮಾಡಿದ ಲಕ್ನೋ 2022 ಮತ್ತು 2023 ರಲ್ಲಿ ಪ್ಲೇ ಆಫ್ ತಲುಪಲು ಯಶಸ್ವಿಯಾಗಿತ್ತು.

ಲಕ್ನೋ ಸೂಪರ್ ಜೈಂಟ್ಸ್

ಐಪಿಎಲ್ 2015 ಮತ್ತು 2016 ರ ಭಾಗವಾಗಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಎರಡು ವರ್ಷಗಳ ಕಾಲ ಕಾಣಿಸಿಕೊಂಡಿತು. 2016 ರಲ್ಲಿ ಈ ತಂಡ ಫೈನಲ್ ತಲುಪಿತ್ತು.

ರೈಸಿಂಗ್ ಪುಣೆ

ಪುಣೆ ವಾರಿಯರ್ಸ್ ಐಪಿಎಲ್ 2010 ಮತ್ತು 2011 ರಲ್ಲಿ ಕೇವಲ ಎರಡು ಋತುಗಳನ್ನು ಆಡಿತು. ಈ ಎರಡೂ ಋತುಗಳಲ್ಲಿ 9 ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಪುಣೆ ವಾರಿಯರ್ಸ್

ಗುಜರಾತ್ ಲಯನ್ಸ್ 2015 ಮತ್ತು 2016 ರಲ್ಲಿ ತಾತ್ಕಾಲಿಕವಾಗಿ IPL ನ ಭಾಗವಾಗಿದ್ದ ಫ್ರಾಂಚೈಸ್. 2015 ರಲ್ಲಿ ಅಗ್ರಸ್ಥಾನದಲ್ಲಿದ್ದರೆ 2016 ರಲ್ಲಿ ಪ್ಲೇಆಫ್ ತಲುಪಲು ವಿಫಲರಾದರು.

ಗುಜರಾತ್ ಲಯನ್ಸ್

ಕೊಚ್ಚಿ ಟಸ್ಕರ್ಸ್ ಕೇರಳವು ಐಪಿಎಲ್ 2021 ರಲ್ಲಿ ಕೇವಲ ಒಂದು ಆವೃತ್ತಿಯಲ್ಲಿ ಮಾತ್ರ ಕಾಣಿಸಿಕೊಂಡಿತು. ಈ ತಂಡ ಕೂಡ ಟ್ರೋಫಿ ಗೆದ್ದಿಲ್ಲ.

ಕೊಚ್ಚಿ ಟಸ್ಕರ್ಸ್