ಐಪಿಎಲ್ 2024 ರಲ್ಲಿ ಧೋನಿ ಮುರಿಯಲಿರುವ 3 ದಾಖಲೆಗಳು

12-March-2024

Author: Vinay Bhat

ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದರೆ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕನಾಗಲಿದ್ದಾರೆ.

ಯಶಸ್ವಿ ನಾಯಕ

ಮಹೇಂದ್ರ ಸಿಂಗ್ ಧೋನಿ ಇಲ್ಲಿಯವರೆಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

5 ಪ್ರಶಸ್ತಿಗಳು

ಸದ್ಯ ಮಾಜಿ ನಾಯಕನಾಗಿರುವ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ನಾಯಕನಾಗಿ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ರೋಹಿತ್ ಶರ್ಮಾ

ಈ ವರ್ಷ ಸಿಎಸ್‌ಕೆ ಐಪಿಎಲ್ ಟೂರ್ನಿಯನ್ನು ಗೆದ್ದರೆ ಎಂಎಸ್ ಧೋನಿ ಒಂದೇ ತಂಡದೊಂದಿಗೆ ಆರು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರನಾಗಲಿದ್ದಾರೆ.

ಹೆಚ್ಚಿನ ಪ್ರಶಸ್ತಿ

ಸಿಎಸ್‌ಕೆ ಜೊತೆಗಿನ ಆರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಧೋನಿ ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದೆ ಹಾಕಲಿದ್ದಾರೆ.

ಆರನೇ ಪ್ರಶಸ್ತಿ

ಧೋನಿ 2024ರ ಐಪಿಎಲ್‌ನಲ್ಲಿ ಕನಿಷ್ಠ 180 ರನ್ ಗಳಿಸಿದರೆ ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಅತಿ ಹೆಚ್ಚು ರನ್

ಸದ್ಯಕ್ಕೆ, ಚೆನ್ನೈ ಸೂಪರ್ ಕಿಂಗ್ಸ್ ಪರ 220 ಐಪಿಎಲ್ ಪಂದ್ಯಗಳನ್ನು ಆಡಿರುವ ಮಹೇಂದ್ರ ಸಿಂಗ್ ಧೋನಿ 4508 ರನ್ ಗಳಿಸಿದ್ದಾರೆ.

4508 ರನ್

ಐಪಿಎಲ್​ನಿಂದ ನಿವೃತ್ತಿಯಾಗಿರುವ ಮಿ. ಐಪಿಎಲ್ ಸುರೇಶ್ ರೈನಾ ಸಿಎಸ್‌ಕೆ ಪರ 176 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 4687 ರನ್ ಗಳಿಸಿದ್ದಾರೆ.

ಸುರೇಶ್ ರೈನಾ