11-03-2024

ಐಪಿಎಲ್ 2024ಕ್ಕೆ ಬಲಿಷ್ಠ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ XI

Author: Vinay Bhat

ಫಾಫ್ ಡು ಪ್ಲೆಸಿಸ್

ಐಪಿಎಲ್ 2024ರಲ್ಲಿ ಫಾಫ್ ಡುಪ್ಲೆಸಿಸ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಗ್ರೀನ್ ಮತ್ತು ಮ್ಯಾಕ್ಸ್‌ವೆಲ್‌ಗೆ ವೇದಿಕೆ ಕಲ್ಪಿಸುವಲ್ಲಿ ಕೊಹ್ಲಿ ಜೊತೆಗಿನ ಪಾಲುದಾರಿಕೆ ಮಹತ್ವದ್ದಾಗಿದೆ.

ವಿರಾಟ್ ಕೊಹ್ಲಿ

ಕೊಹ್ಲಿ ಫಾಫ್ ಜೊತೆಗೆ ಓಪನಿಂಗ್ ಮಾಡಲಿದ್ದಾರೆ. ಕೊಹ್ಲಿ ಮತ್ತು ಫಾಫ್ ಇಬ್ಬರೂ ಕಳೆದ ಋತುವಿನಲ್ಲಿ ಹಲವಾರು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ.

ರಜತ್ ಪಾಟಿದಾರ್

ಆರ್​ಸಿಬಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡ ಬಳಿಕ ರಜತ್ ಪಾಟಿದಾರ್ ಅವರು ಪಾತ್ರವನ್ನು ವಹಿಸಿಕೊಳ್ಳಬಹುದು. ಕಳೆದ ಸೀಸನ್​ನಲ್ಲಿ ಇವರು ಆಡಿರಲಿಲ್ಲ.

ಗ್ಲೆನ್ ಮ್ಯಾಕ್ಸ್‌ವೆಲ್

ಆರ್‌ಸಿಬಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಬೋರ್ಡ್‌ನಲ್ಲಿ ದೊಡ್ಡ ಸ್ಕೋರ್‌ ಗಳಿಸಲು ಮ್ಯಾಕ್ಸಿ ಸ್ಫೋಟಕ ಆಟ ಸಹಾಯ ಮಾಡಲಿದೆ.

ಕ್ಯಾಮರೂನ್ ಗ್ರೀನ್

ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ನಿಂದ RCB ಗೆ ಡ್ರಾಫ್ಟ್ ಮಾಡಲಾಗಿದೆ. ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಂಡಕ್ಕೆ ಕೊಡಗೆ ನೀಡಲಿದ್ದಾರೆ.

ಮಹಿಪಾಲ್ ಲೋಮ್ರೋರ್

ಮಹಿಪಾಲ್ ಲೊಮ್ರೋರ್ ಕಳೆದ ಸೀಸನ್​ನಲ್ಲಿ ಭರವಸೆ ಮೂಡಿಸಿದ್ದರು. ಇವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಈ ಸೀಸನ್​ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ನೋಡಬೇಕಿದೆ.

ದಿನೇಶ್ ಕಾರ್ತಿಕ್

ಕಾರ್ತಿಕ್ ತಂಡದ ನಿಯೋಜಿತ ಫಿನಿಶರ್ ಆಗಿರುತ್ತಾರೆ. ಅವರು ತಮ್ಮ ಅಂತಿಮ ಐಪಿಎಲ್ ಅನ್ನು ಆಡಲಿದ್ದು, ತಂಡಕ್ಕೆ ದೊಡ್ಡ ಕೊಡುಗೆ ನೀಡುವುದು ಖಚಿತ.

ಮೊಹಮ್ಮದ್ ಸಿರಾಜ್

ಸಿರಾಜ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. RCB ಬೌಲಿಂಗ್‌ನಲ್ಲಿ ಸ್ವಲ್ಪ ದುರ್ಬಲವಾಗಿದೆ. ಹೀಗಾಗಿ ಪಂದ್ಯಾವಳಿಯಲ್ಲಿ ಸಿರಾಜ್ ಮೇಲೆ ಒತ್ತಡವಿದೆ.

ಅಲ್ಜಾರಿ ಜೋಸೆಫ್

ಅಲ್ಜಾರಿ ಜೋಸೆಫ್ ಅವರನ್ನು ಐಪಿಎಲ್‌ನಲ್ಲಿ ಆರ್‌ಸಿಬಿ 11.50 ಕೋಟಿ ರೂಪಾಯಿಗೆ ಕರೆತಂದಿತ್ತು. ಜೋಸೆಫ್ ಮ್ಯಾಚ್ ವಿನ್ನರ್‌ನ ಎಲ್ಲಾ ಅಂಶಗಳನ್ನು ಹೊಂದಿದ್ದಾರೆ.

ಆಕಾಶ್ ದೀಪ್

ಆಕಾಶ್ ದೀಪ್ ಇತ್ತೀಚೆಗೆ ಟೆಸ್ಟ್‌ನಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದರು. ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಅಗ್ರ ಕ್ರಮಾಂಕವನ್ನು ದಂಗುಬಡಿಸುವ ಅದ್ಭುತ ಪ್ರದರ್ಶನ ನೀಡಿದರು.

ಕರ್ಣ್ ಶರ್ಮಾ

RCB ಯಾವುದೇ ಅನುಭವಿ ಸ್ಪಿನ್ನರ್ ಹೊಂದಿಲ್ಲ. ಐಪಿಎಲ್ 2024 ರಲ್ಲಿ ಕರ್ಣ್ ಶರ್ಮಾ ಅವರು ಮುಖ್ಯ ಸ್ಪಿನ್ನರ್ ಆಗಿರುತ್ತಾರೆ.