23-03-2024

ಟಿ20ಯಲ್ಲಿ ಬರೋಬ್ಬರಿ 12,000 ರನ್‌ ಗಳಿಸಿದ ಬ್ಯಾಟರ್‌ಗಳು ಯಾರೆಲ್ಲ?

Author: Vinay Bhat

ಕ್ರಿಸ್ ಗೇಲ್

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಕ್ರಿಸ್ ಗೇಲ್. ಇವರು 14,562 ರನ್ ಗಳಿಸಿ ಟಿ20ಯಲ್ಲಿ ಸಾರ್ವಕಾಲಿಕ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.

ಕ್ರಿಸ್ ಗೇಲ್

ಹಾಗೆಯೆ ಕ್ರಿಸ್ ಗೇಲ್ ಟಿ20 ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ (22) ದಾಖಲೆಯನ್ನೂ ಹೊಂದಿದ್ದಾರೆ.

ಶೋಯೆಬ್ ಮಲಿಕ್

ಟಿ20 ಇತಿಹಾಸದಲ್ಲಿ ಅತ್ಯಂತ ಹಿರಿಯ ಮತ್ತು ಸಕ್ರಿಯ ಅಂತರಾಷ್ಟ್ರೀಯ ಆಟಗಾರ ಶೋಯೆಬ್ ಮಲಿಕ್ ಟಿ20ಯಲ್ಲಿ 13360 ರನ್ ಗಳಿಸಿದ್ದಾರೆ.

ಕೀರಾನ್ ಪೊಲಾರ್ಡ್

ವೆಸ್ಟ್ ಇಂಡೀಸ್ ದಿಗ್ಗಜ ಕೀರಾನ್ ಪೊಲಾರ್ಡ್ ತಮ್ಮ ಟಿ20 ವೃತ್ತಿಜೀವನದಲ್ಲಿ ಒಟ್ಟಾರೆಯಾಗಿ 12900 ರನ್ ಸಿಡಿಸಿದ್ದಾರೆ.

ಅಲೆಕ್ಸ್ ಹೇಲ್ಸ್

ಅಲೆಕ್ಸ್ ಹೇಲ್ಸ್ ಅವರು ತಮ್ಮ ವೃತ್ತಿಜೀವನದಲ್ಲಿ ಇಂಗ್ಲೆಂಡ್ ತಂಡದಲ್ಲಿ ಮತ್ತು ಇತರೆ ಫ್ರಾಂಚೈಸ್ ಲೀಗ್‌ಗಳಲ್ಲಿ ಇದುವರೆಗೆ 12089 ರನ್‌ಗಳನ್ನು ಗಳಿಸಿದ್ದಾರೆ.

ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ಟಿ20 ಪಂದ್ಯಗಳಲ್ಲಿ 12,065 ರನ್ ಸಿಡಿಸಿದ್ದಾರೆ. ಇವರು ಐಪಿಎಲ್ ಆರೆಂಜ್ ಕ್ಯಾಪ್ ಅನ್ನು ಮೂರು ಬಾರಿ ಗೆದ್ದಿದ್ದಾರೆ.

ವಿರಾಟ್ ಕೊಹ್ಲಿ

ಕೊಹ್ಲಿ ಟ್ವೆಂಟಿ-20 ಪಂದ್ಯಗಳಲ್ಲಿ 12,000 ರನ್ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಐಪಿಎಲ್​ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರಾಗಿದ್ದಾರೆ.