ಆರ್ಸಿಬಿ ಸೋಲಿಗೆ ಕಾರಣವಾಗಿದ್ದು 4 ದಿನಗಳ ಹಿಂದೆ ಸ್ಟ್ರೆಚರ್ ಮೇಲೆ ಮಲಗಿದ್ದ ಆಟಗಾರ
23 March2024
Author: Vinay Bhat
ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಪದಾರ್ಪಣೆ ಮಾಡಿದ ಮುಸ್ತಾಫಿಜುರ್ ರೆಹಮಾನ್ ಮಾರಕ ದಾಳಿ ಸಂಘಟಿಸಿದರು.
ಮುಸ್ತಾಫಿಜುರ್ ರೆಹಮಾನ್
ಆರ್ಸಿಬಿ ವಿರುದ್ಧ ಮುಸ್ತಾಫಿಜುರ್ ರೆಹಮಾನ್ 4 ವಿಕೆಟ್ ಪಡೆದರು. 4 ಓವರ್ ಬೌಲಿಂಗ್ ಕೇವಲ 29 ರನ್‌ಗಳನ್ನು ನೀಡಿದರು.
ಪ್ರಮುಖ 4 ವಿಕೆಟ್
ರೆಹಮಾನ್ ತಮ್ಮ ಮೊದಲ ಓವರ್‌ನಲ್ಲಿಯೇ ಡುಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಅವರ ವಿಕೆಟ್‌ಗಳನ್ನು ಪಡೆದರು. 2ನೇ ಓವರ್‌ನಲ್ಲಿ ವಿರಾಟ್ ಮತ್ತು ಗ್ರೀನ್ ವಿಕೆಟ್ ಕಿತ್ತರು.
10 ಎಸೆತಗಳಲ್ಲಿ 4 ವಿಕೆಟ್
ಕೇವಲ 4 ದಿನಗಳ ಹಿಂದೆ ರೆಹಮಾನ್ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಬೇಕಾಯಿತು.
ಇಂಜುರಿ
ಮುಸ್ತಾಫಿಜುರ್ ರೆಹಮಾನ್ ಬೇಗನೆ ಫಿಟ್ ಆಗಿ ಮೈದಾನಕ್ಕೆ ಮರಳಿದರು. ಆದರೆ, ಅವರು ಮೊದಲ ಪಂದ್ಯದಲ್ಲಿ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡಲಿಲ್ಲ.
ವಿಶೇಷ ಬೌಲಿಂಗ್
ಮುಸ್ತಾಫಿಜುರ್ ರೆಹಮಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2024 ಆಕ್ಷನ್ನಲ್ಲಿ ಮೂಲ ಬೆಲೆ 2 ಕೋಟಿಗೆ ಖರೀದಿಸಿತ್ತು.
2 ಕೋಟಿಗೆ ಖರೀದಿ
ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಸಿಎಸ್ಕೆ 6 ವಿಕೆಟುಗಳ ಭರ್ಜರಿ ಜಯ ಸಾಧಿಸಿತು.
ಸಿಎಸ್ಕೆ ಶುಭಾರಂಭ
ಐಪಿಎಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ 10 ಬ್ಯಾಟರ್ಸ್ ಯಾರು ನೋಡಿ