23-02-2024

ಐಪಿಎಲ್ 2024: ಆರ್‌ಸಿಬಿ ಪಂದ್ಯದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Author: Vinay Bhat

ಐಪಿಎಲ್ 2024 ವೇಳಾಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ. ಮೊದಲ ಹಂತದಲ್ಲಿ, 21 ಆರಂಭಿಕ ಪಂದ್ಯಗಳ ವೇಳಾಪಟ್ಟಿಯನ್ನು ಹೆಸರಿಸಲಾಗಿದೆ.

ಆರ್‌ಸಿಬಿ

ಆರ್‌ಸಿಬಿ ಐಪಿಎಲ್ 2024 ರಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಗುರಿ ಹೊಂದಿದೆ. ಇದಕ್ಕಾಗಿ ಆಕ್ಷನ್​ನಲ್ಲಿ ಕೆಲ ಆಟಗಾರರನ್ನು ಖರೀದಿಸಿತ್ತು.

ಆರ್‌ಸಿಬಿ ಸಾಮರ್ಥ್ಯ

ಆರ್‌ಸಿಬಿಯ ಶಕ್ತಿ ಬ್ಯಾಟಿಂಗ್‌. ತಂಡವು ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಅವರ ಸೇವೆಯನ್ನು ಹೊಂದಿದೆ.

ದೌರ್ಬಲ್ಯಗಳು

ಆರ್‌ಸಿಬಿಗೆ ಬೌಲಿಂಗ್ ದೊಡ್ಡ ಚಿಂತೆಯಾಗಿದೆ. ಪ್ರಮುಖ ಬೌಲರ್ ಆಗಿ ಸಿರಾಜ್ ಇದ್ದಾರಷ್ಟೆ. ಅಲ್ಜಾರಿ ಜೋಸೆಫ್, ಫರ್ಗುಸನ್ ಮತ್ತು ಟಾಮ್ ಕುರಾನ್ ಇದ್ದಾರೆ.

RCB vs CSK

ಎಂಎಸ್ ಧೋನಿಯ CSK ವಿರುದ್ಧದ ಪಂದ್ಯದ ಮೂಲಕ ಆರ್‌ಸಿಬಿ ಐಪಿಎಲ್ 2024 ಅನ್ನು ಆರಂಭಿಸಲಿದೆ. ಮಾರ್ಚ್ 22, 2024 ರಂದು ಚೆನ್ನೈನಲ್ಲಿ ಪಂದ್ಯ ನಡೆಯಲಿದೆ.

RCB vs PBKS

ಮಾರ್ಚ್ 25 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ RCB ಯು ತನ್ನ ಎರಡನೇ ಪಂದ್ಯ ಆಡಲಿದೆ.

RCB vs KKR

ಮಾರ್ಚ್ 29 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಕೆಕೆಆರ್ ವಿರುದ್ಧ ಸೆಣಸಲಿದೆ. ಈ ಪಂದ್ಯವು ಸಂಜೆ 6:30 IST ಕ್ಕೆ ಪ್ರಾರಂಭವಾಗುತ್ತದೆ.

RCB vs LSG

ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಲಿದೆ. ಈ ಋತುವಿನಲ್ಲಿ ಇದು ಆರ್‌ಸಿಬಿಯ ಮೂರನೇ ತವರಿನ ಪಂದ್ಯ.

RCB vs RR

ಆರ್‌ಸಿಬಿಯ ಐದನೇ ಪಂದ್ಯ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿದೆ. ಈ ಪಂದ್ಯ ಜೈಪುರದಲ್ಲಿ ನಡೆಯಲಿದೆ.