16-05-2024

IPL 2024: ಐಪಿಎಲ್‌ನಲ್ಲಿ ರನ್ ಬರ ಎದುರಿಸಿದ ಐವರು ಬ್ಯಾಟರ್​ಗಳಿವರು

Author: ಪೃಥ್ವಿ ಶಂಕರ

17ನೇ ಆವೃತ್ತಿಯ ಐಪಿಎಲ್ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 60ಕ್ಕೂ ಹೆಚ್ಚು ಲೀಗ್ ಹಂತದ ಪಂದ್ಯಗಳು ನಡೆದಿವೆ.

ಈ ಸೀಸನ್‌ನಲ್ಲಿ ಹಲವು ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡಿದರೆ, ಇನ್ನು ಕೆಲವು ಆಟಗಾರರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಅವರುಗಳ ಪಟ್ಟಿ ಇಲ್ಲಿದೆ.

ಈ ಪಟ್ಟಿಯಲ್ಲಿ ಮೊದಲ ಹೆಸರು ಸನ್‌ರೈಸರ್ಸ್ ಹೈದರಾಬಾದ್‌ನ ಸ್ಟಾರ್ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಾಮ್ ಅವರದ್ದು, ಅವರು ಒಂಬತ್ತು ಪಂದ್ಯಗಳಲ್ಲಿ ಕೇವಲ 199 ರನ್ ಮಾತ್ರ ಬಾರಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದು, ಆಡಿರುವ 13 ಪಂದ್ಯಗಳಲ್ಲಿ ಕೇವಲ 306 ರನ್ ಕಲೆಹಾಕಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲು ಅಥವಾ ಬೌಲಿಂಗ್‌ನಲ್ಲಿ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆಡಿದ ಎಂಟು ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 104 ರನ್‌ಗಳು ಮಾತ್ರ ಬಂದಿವೆ.

ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರ ಬ್ಯಾಟ್ ಕೂಡ ಇಡೀ ಸೀಸನ್ ಉದ್ದಕ್ಕೂ ಮೌನವಾಗಿತ್ತು. ಅವರು ಆಡಿದ 12 ಪಂದ್ಯಗಳಲ್ಲಿ 209 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಈ ಪಟ್ಟಿಯಲ್ಲಿ ಅತ್ಯಂತ ಆಶ್ಚರ್ಯಕರ ಹೆಸರು ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ. ಹಿಟ್​ಮ್ಯಾನ್ ಈ ಸೀಸನ್​ನಲ್ಲಿ 1 ಶತಕ ಬಾರಿಸಿದ ಹೊರತಾಗಿಯೂ ಆಡಿದ 13 ಪಂದ್ಯಗಳಲ್ಲಿ ಅವರ ಬ್ಯಾಟ್​ನಿಂದ 349 ರನ್ ಮಾತ್ರ ಸಿಡಿದವು.