18-04-2024

IPL 2024: ಕೇವಲ 16 ರನ್ ಬಾರಿಸಿದ ಪಂತ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ಯಾಕೆ?

Author: ಪೃಥ್ವಿ ಶಂಕರ

ಈ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದು, ಸತತ 2 ಪಂದ್ಯಗಳನ್ನು ಗೆದ್ದಿದೆ.

ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದ್ದ ರಿಷಬ್ ಪಂತ್ ಪಡೆ ಗುಜರಾತ್ ಟೈಟಾನ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡವನ್ನು ಡೆಲ್ಲಿ ಕೇವಲ 89 ರನ್‌ಗಳಿಗೆ ಆಲೌಟ್ ಮಾಡಿತ್ತು.

ಈ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 9 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಡೆಲ್ಲಿ ಪರ ಇಶಾಂತ್ ಶರ್ಮಾ 8 ರನ್‌ಗಳಿಗೆ 2 ವಿಕೆಟ್, ಮುಖೇಶ್ ಕುಮಾರ್ 3 ವಿಕೆಟ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ 2 ವಿಕೆಟ್ ಪಡೆದರು. ಅದಾಗ್ಯೂ ಈ ಮೂವರಲ್ಲಿ ಯಾರಿಗೂ ಪಂದ್ಯ ಶ್ರೇಷ್ಠ ಸಿಗಲಿಲ್ಲ.

ಆದರೆ ಪಂದ್ಯದಲ್ಲಿ ಕೇವಲ 16 ರನ್ ಕಲೆಹಾಕಿದ ಡೆಲ್ಲಿ ಕ್ಯಾಪ್ಟನ್ ರಿಷಬ್ ಪಂತ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಬ್ಯಾಟಿಂಗ್​ನಲ್ಲಿ ಕೇವಲ 16 ರನ್ ಬಾರಿಸಿದ ಪಂತ್, ವಿಕೆಟ್ ಹಿಂದೆ ಬರೋಬ್ಬರಿ 3 ದೊಡ್ಡ ವಿಕೆಟ್‌ ಉರುಳಿಸಿದರು. ಹೀಗಾಗಿ ಪಂತ್​ಗೆ ಈ ಪ್ರಶಸ್ತಿ ನೀಡಲಾಯಿತು.

ಮೊದಲು ಪಂತ್ ಅತ್ಯುತ್ತಮ ಡೈವ್‌ನೊಂದಿಗೆ ಡೇವಿಡ್ ಮಿಲ್ಲರ್ ಕ್ಯಾಚ್ ಪಡೆದರು. ನಂತರ ಒಂದೇ ಓವರ್‌ನಲ್ಲಿ ಅಭಿನವ್ ಮನೋಹರ್ ಮತ್ತು ಶಾರುಖ್ ಖಾನ್ ಅವರನ್ನು ಸ್ಟಂಪ್ ಮಾಡಿದರು.