IPL 2025 Points Table: ಚೆನ್ನೈ ವಿರುದ್ಧ ಗೆದ್ದು 16 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ ಆರ್​ಸಿಬಿ

04 May 2025                                    Author: Vinay Bhat

Pic credit - Google

ಮೂರನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಘ ಚೆನ್ನೈ ವಿರುದ್ಧ ಗೆದ್ದು ಅಗ್ರಸ್ಥಾನಕ್ಕೇರಿದೆ. ಆಡಿದ 11 ಪಂದ್ಯಗಳಲ್ಲಿ 8 ರಲ್ಲಿ ಜಯ 3 ಸೋಲು ಕಂಡಿದೆ. +0.482 ರನ್​ ರೇಟ್ ಆಧಾರದ ಮೇಲೆ 16 ಅಂಕ ಪಡೆದು ಪ್ಲೇ ಆಫ್​ಗೆ ಹತ್ತಿರವಾಗಿದೆ.

ಆರ್​ಸಿಬಿ

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದಿದೆ. ಆಡಿದ 11 ಪಂದ್ಯಗಳಲ್ಲಿ ನಾಲ್ಕು ಸೋಲು ಹಾಗೂ ಏಳು ಜಯ ಕಂಡು 14 ಅಂಕ ಪಡೆದುಕೊಂಡಿದ್ದು, +1.274 ರನ್​ರೇಟ್​ ಹೊಂದಿದೆ.

ಮುಂಬೈ ಇಂಡಿಯನ್ಸ್

ನಾಲ್ಕನೇ ಸ್ಥಾನದಲ್ಲಿದ್ದ ಶುಭ್​ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಮೂಎನೇ ಸ್ಥಾನದಲ್ಲಿದೆ. ಇವರು ಆಡಿದ 10 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿ ಮೂರರಲ್ಲಿ ಸೋತು 14 ಅಂಕ ಸಂಪಾದಿಸಿದೆ. +0.867 ರನ್​ರೇಟ್ ಹೊಂದಿದೆ.

ಗುಜರಾತ್ ಟೈಟಾನ್ಸ್

ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಆಡಿದ 10 ಪಂದ್ಯಗಳಲ್ಲಿ ಆರಲ್ಲಿ ಜಯ- ಮೂರರಲ್ಲಿ ಸೋಲು ಹಾಗೂ ಒಂದು ಪಂದ್ಯ ರದ್ದುಗೊಂಡು +0.199 ರನ್​ರೇಟ್​ನೊಂದಿಗೆ 13 ಅಂಕ ಪಡೆದುಕೊಂಡಿದೆ.

ಪಂಜಾಬ್ ಕಿಂಗ್ಸ್

ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಸ್ಥಾನದಲ್ಲಿದೆ. ಆಡಿದ 10 ಪಂದ್ಯಗಳಲ್ಲಿ ನಾಲ್ಕು ಪಂದ್ಯದಲ್ಲಿ ಸೋಲು ಉಳಿದ 6 ರಲ್ಲಿ ಜಯ ಕಂಡು 12 ಅಂಕ ಸಂಪಾದಿಸಿದೆ. +0.362 ರನ್​ರೇಟ್ ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್

ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರನೇ ಸ್ಥಾನಕ್ಕೆ ಕುಸಿದಿದೆ. ಆಡಿದ 10 ಪಂದ್ಯಗಳಲ್ಲಿ ಐದು ಗೆಲುವು 5 ಸೋಲು ಕಾಣುವ ಮೂಲಕ -0.325 ರನ್​ರೇಟ್​ ಹೊಂದಿದೆ.

ಲಕ್ನೋ ಸೂಪರ್ ಜೈಂಟ್ಸ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ- ಐದರಲ್ಲಿ ಸೋಲು ಕಾಣುವ ಮೂಲಕ +0.271 ರನ್​ ರೇಟ್ ಹೊಂದಿದೆ.

ಕೆಕೆಆರ್

ರಾಜಸ್ಥಾನ್ ರಾಯಲ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ 11 ಪಂದ್ಯಗಳಲ್ಲಿ ಮೂರರಲ್ಲಿ ಜಯ- ಎಂಟರಲ್ಲಿ ಸೋಲು ಕಂಡಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಎಂಟನೇ ಸ್ಥಾನದಲ್ಲಿದ್ದು, -0.780 ರನ್​ ರೇಟ್ ಹೊಂದಿದೆ.

ರಾಜಸ್ಥಾನ್ ರಾಯಲ್ಸ್

ಸನ್​ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಆಡಿದ 10 ಪಂದ್ಯದಲ್ಲಿ ಮೂರು ಗೆಲುವು- ಏಳು ಸೋಲಿನ ಮೂಲಕ 6 ಅಂಕ ಸಂಪಾದಿಸಿದೆ. -1.192 ರನ್​ ರೇಟ್ ಹೊಂದಿದೆ.

ಸನ್​ರೈಸರ್ಸ್ ಹೈದರಾಬಾದ್

ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿರುವ 11 ಪಂದ್ಯಗಳಲ್ಲಿ ಒಂಬತ್ತು ಸೋಲು 2 ಗೆಲುವು ಮೂಲಕ 4 ಅಂಕ ಪಡೆದಿದೆ. ಈ ತಂಡ -1.117 ರನ್ ರೇಟ್​ನೊಂದಿಗೆ ಹತ್ತನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್