ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್; ಮತ್ತೊಂದು ದಾಖಲೆ ಬರೆದ ಭುವಿ

28 April 2025

Pic credit: Google

 By: ಪೃಥ್ವಿ ಶಂಕರ 

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್​ಗಳಿಂದ ಗೆದ್ದುಕೊಂಡಿತು.

ಆರ್​ಸಿಬಿಗೆ ಗೆಲುವು

Pic credit: Google

ಇನ್ನು ಇದೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಭುವನೇಶ್ವರ್ ಕುಮಾರ್ ವಿಶೇಷ ಸಾಧನೆ ಮಾಡಿದ್ದಾರೆ.

ಭುವಿ ಸಾಧನೆ

Pic credit: Google

ದೆಹಲಿ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ನಾಲ್ಕು ಓವರ್‌ಗಳಲ್ಲಿ 33 ರನ್‌ಗಳಿಗೆ ಮೂರು ವಿಕೆಟ್ ಪಡೆದರು.

ಮೂರು ವಿಕೆಟ್

Pic credit: Google

ಇದರೊಂದಿಗೆ, ಭುವನೇಶ್ವರ್ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಜಂಟಿ 2ನೇ ಸ್ಥಾನ

Pic credit: Google

ಈ ವಿಷಯದಲ್ಲಿ ಭುವನೇಶ್ವರ್ ಪಿಯೂಷ್ ಚಾವ್ಲಾ ಅವರನ್ನು ಸರಿಗಟ್ಟಿದ್ದಾರೆ. ಐಪಿಎಲ್‌ನಲ್ಲಿ ಭುವನೇಶ್ವರ್ ಮತ್ತು ಪಿಯೂಷ್ ಸಮಾನವಾಗಿ 192 ವಿಕೆಟ್‌ಗಳನ್ನು ಪಡೆದಿದ್ದಾರೆ.

192 ವಿಕೆಟ್

Pic credit: Google

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಯುಜ್ವೇಂದ್ರ ಚಾಹಲ್ ಹೆಸರಿನಲ್ಲಿದೆ, ಅವರು ಈ ಲೀಗ್‌ನಲ್ಲಿ ಇದುವರೆಗೆ 214 ವಿಕೆಟ್‌ಗಳನ್ನು ಪಡೆದಿದ್ದಾರೆ.

ಯುಜ್ವೇಂದ್ರ ಚಾಹಲ್

Pic credit: Google

ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್‌ನ ಸುನಿಲ್ ನರೈನ್ ಐಪಿಎಲ್‌ನಲ್ಲಿ 187 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸುನಿಲ್ ನರೈನ್

Pic credit: Google