ಸಿಎಸ್‌ಕೆ ಪರ ಮೊದಲ ಸೀಸನ್ನಲ್ಲೇ ದಾಖಲೆ ಬರೆದ ಖಲೀಲ್ ಅಹ್ಮದ್
26 April 2025
Pic credit: Google
By: ಪೃಥ್ವಿ ಶಂಕರ
ಐಪಿಎಲ್ 2025 ರಲ್ಲಿ ಖಲೀಲ್ ಅಹ್ಮದ್ ಇದುವರೆಗೆ ಸಿಎಸ್‌ಕೆ ಪರ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
ಖಲೀಲ್ ಅಹ್ಮದ್
Pic credit: Google
ಪವರ್‌ಪ್ಲೇನಲ್ಲಿ ಖಲೀಲ್ ಮಾರಕ ಪ್ರದರ್ಶನ ನೀಡಿದ್ದು, ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ತಮ್ಮ 12 ವಿಕೆಟ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಪವರ್‌ಪ್ಲೇ
Pic credit: Google
ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಖಲೀಲ್ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನು ಮಾಡಿದ್ದಾರೆ.
ಮೊದಲ ಓವರ್
Pic credit: Google
ಸಿಎಸ್‌ಕೆ ಪರ ಒಂದೇ ಸೀಸನ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅತಿ ಹೆಚ್ಚು ವಿಕೆಟ್
Pic credit: Google
ಈ ವಿಷಯದಲ್ಲಿ ಅವರು ಮುಖೇಶ್ ಚೌಧರಿ ಅವರನ್ನು ಸರಿಗಟ್ಟಿದ್ದು, 2022 ರ ಸೀಸನ್ನ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಮುಖೇಶ್ ಒಟ್ಟು ಐದು ವಿಕೆಟ್‌ಗಳನ್ನು ಕಬಳಿಸಿದ್ದರು.
ಮುಖೇಶ್ ಚೌಧರಿ
Pic credit: Google
ಇವರಿಬ್ಬರ ನಂತರ, ಆಲ್ಬಿ ಮಾರ್ಕೆಲ್ ಮತ್ತು ದೀಪಕ್ ಚಹಾರ್ ಇದ್ದು, 2009 ರ ಸೀಸನ್‌ನಲ್ಲಿ ಮಾರ್ಕೆಲ್ ಮತ್ತು 2019 ರ ಸೀಸನ್‌ನಲ್ಲಿ ಚಾಹರ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಒಟ್ಟು 4 ವಿಕೆಟ್‌ಗಳನ್ನು ಪಡೆದಿದ್ದರು.
ದೀಪಕ್ ಚಹಾರ್
Pic credit: Google
ಅವರ ನಂತರ ಮೋಹಿತ್ ಶರ್ಮಾ ಇದ್ದು, 2013 ರಲ್ಲಿ ಸಿಎಸ್‌ಕೆ ಪರ ಆಡುವಾಗ ಮೋಹಿತ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.