ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ
21 April 2025
Pic credit: Google
By: ಪೃಥ್ವಿ ಶಂಕರ
ಬಿಸಿಸಿಐ 2024-2025ನೇ ಸಾಲಿನ ಆಟಗಾರರ ವಾರ್ಷಿಕ ಕೇಂದ್ರ ಒಪ್ಪಂದಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಒಟ್ಟು 34 ಆಟಗಾರರಿದ್ದಾರೆ.
34 ಆಟಗಾರರು
Pic credit: Google
ನಾಲ್ಕು ಆಟಗಾರರನ್ನು ಎ+ ದರ್ಜೆಯಲ್ಲಿ, ಆರು ಆಟಗಾರರನ್ನು ಎ ದರ್ಜೆಯಲ್ಲಿ, ಐದು ಆಟಗಾರರು ಬಿ ದರ್ಜೆಯಲ್ಲಿದ್ದರೆ, 19 ಆಟಗಾರರು ಸಿ ದರ್ಜೆಯಲ್ಲಿದ್ದಾರೆ.
4 ಗ್ರೇಡ್
Pic credit: Google
ನಿತೀಶ್ ರೆಡ್ಡಿ, ಹರ್ಷಿತ್ ರಾಣಾ, ಅಭಿಷೇಕ್ ಶರ್ಮಾ ಮತ್ತು ವರುಣ್ ಚಕ್ರವರ್ತಿ ಮೊದಲ ಬಾರಿಗೆ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆದಿದ್ದಾರೆ. ಇವರೆಲ್ಲರೂ ಗ್ರೇಡ್-ಸಿ ನಲ್ಲಿ ಸ್ಥಾನ ಪಡೆದಿದ್ದಾರೆ.
ಚೊಚ್ಚಲ ಅವಕಾಶ
Pic credit: Google
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಲಾಭ ಪಡೆದಿದ್ದು, ಅವರು ಗ್ರೇಡ್-ಬಿ ನಿಂದ ಗ್ರೇಡ್-ಎ ಗೆ ಬಡ್ತಿ ಪಡೆದಿದ್ದಾರೆ.
ರಿಷಬ್ ಪಂತ್
Pic credit: Google
ಈ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದು, ಕೆಎಲ್ ರಾಹುಲ್ ಎ ಗ್ರೇಡ್‌ನಲ್ಲಿ ಹಾಗೂ ಬೌಲರ್ ಪ್ರಸಿದ್ಧ್ ಕೃಷ್ಣ ಸಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಇಬ್ಬರು ಕನ್ನಡಿಗರು
Pic credit: Google
ಬಿಸಿಸಿಐ ವಾರ್ಷಿಕವಾಗಿ ಎ+ ದರ್ಜೆಯ ಆಟಗಾರರಿಗೆ 7 ಕೋಟಿ ರೂ., ಎ ದರ್ಜೆಯ ಆಟಗಾರರಿಗೆ 5 ಕೋಟಿ ರೂ. ಬಿ ದರ್ಜೆಯ ಆಟಗಾರರಿಗೆ 3 ಕೋಟಿ ರೂ, ಮತ್ತು 'ಸಿ' ದರ್ಜೆಯ ಆಟಗಾರರಿಗೆ 1 ಕೋಟಿ ರೂಪಾಯಿ ನೀಡುತ್ತದೆ.
ವಾರ್ಷಿಕ ವೇತನ
Pic credit: Google
ಒಂದು ವರ್ಷದೊಳಗೆ ಕನಿಷ್ಠ ಮೂರು ಟೆಸ್ಟ್ ಅಥವಾ ಎಂಟು ಏಕದಿನ ಅಥವಾ 10 ಟಿ20 ಪಂದ್ಯಗಳನ್ನು ಆಡಿದ ಆಟಗಾರರನ್ನು ಮಾತ್ರ ಬಿಸಿಸಿಐನ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಸೇರಿಸಲಾಗಿದೆ.