IPL: ಅತಿ ಹೆಚ್ಚು ಪಂದ್ಯಶ್ರೇಷ್ಠ; ರೋಹಿತ್ ದಾಖಲೆ ಸರಿಗಟ್ಟಿದ ಕೊಹ್ಲಿ

IPL: ಅತಿ ಹೆಚ್ಚು ಪಂದ್ಯಶ್ರೇಷ್ಠ; ರೋಹಿತ್ ದಾಖಲೆ ಸರಿಗಟ್ಟಿದ ಕೊಹ್ಲಿ

20 April 2025

Pic credit: IPL X

 By: ಪೃಥ್ವಿ ಶಂಕರ 

TV9 Kannada Logo For Webstory First Slide

ಐಪಿಎಲ್ 37 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿತು.

ಗೆದ್ದ ಆರ್​​ಸಿಬಿ

Pic credit: IPL X

ಈ ಪಂದ್ಯದಲ್ಲಿ ಆರ್​ಸಿಬಿ ಪರ ಗೆಲುವಿನ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 73 ರನ್ ಬಾರಿಸಿದರು.

ಕೊಹ್ಲಿ 73 ರನ್

Pic credit: IPL X

ಕೊಹ್ಲಿಯ ಈ ಅಜೇಯ ಗೆಲುವಿನ ಇನ್ನಿಂಗ್ಸ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಈ ಮೂಲಕ ಕೊಹ್ಲಿ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದರು.

ಕೊಹ್ಲಿ ಪಂದ್ಯ ಶ್ರೇಷ್ಠ

Pic credit: IPL X

ವಾಸ್ತವವಾಗಿ ಐಪಿಎಲ್‌ ಇತಿಹಾಸದಲ್ಲಿ ಇದು ವಿರಾಟ್ ಕೊಹ್ಲಿ ಪಡೆದ 19ನೇ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿದೆ. ಈ ಮೂಲಕ ಕೊಹ್ಲಿ, ರೋಹಿತ್ ಅವರನ್ನು ಸರಿಗಟ್ಟಿದರು.

19ನೇ ಪಂದ್ಯ ಶ್ರೇಷ್ಠ

Pic credit: IPL X

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕೂಡ ಐಪಿಎಲ್‌ನಲ್ಲಿ ಇದುವರೆಗೆ 19 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.

19 ಪಂದ್ಯ ಶ್ರೇಷ್ಠ

Pic credit: IPL X

ಈ ಮೂಲಕ ಈ ಇಬ್ಬರು ಆಟಗಾರರು ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

ಜಂಟಿ 3ನೇ ಸ್ಥಾನ

Pic credit: IPL X

25 ಬಾರಿ ಈ ಪ್ರಶಸ್ತಿ ಗೆದ್ದಿರುವ ಎಬಿ ಡಿವಿಲಿಯರ್ಸ್ ಮೊದಲ ಸ್ಥಾನದಲ್ಲಿದ್ದರೆ, ಕ್ರಿಸ್ ಗೇಲ್ 22 ಪ್ರಶಸ್ತಿಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಡಿವಿಲಿಯನ್ ನಂ.1

Pic credit: IPL X