ಐಪಿಎಲ್‌ನಲ್ಲಿ ಅಬ್ಬರಿಸಿದ ಕನ್ನಡಿಗ ಕರುಣ್ ನಾಯರ್

14 April 2025

Pic credit: Google

 By: ಪೃಥ್ವಿ ಶಂಕರ 

1076 ದಿನಗಳ ನಂತರ ಐಪಿಎಲ್‌ಗೆ ಲಗ್ಗೆ ಇಟ್ಟಿರುವ ಕನ್ನಡಿಗ ಕರುಣ್ ನಾಯರ್ ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲೇ ಸಖತ್ ಸದ್ದು ಮಾಡಿದರು.

1076 ದಿನಗಳ ನಂತರ

Pic credit: Google

ಡೆಲ್ಲಿ ಕ್ಯಾಪಿಟಲ್ಸ್ ಪರ ಅಂಗಳಕ್ಕಿಳಿದಿದ್ದ ನಾಯರ್ ಇಂಪ್ಯಾಕ್ಟ್ ಆಟಗಾರನಾಗಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನು ಬರೆದರು.

ಎರಡನೇ ಆಟಗಾರ

Pic credit: Google

ಕರುಣ್ ನಾಯರ್ ಐಪಿಎಲ್ 2022 ರಲ್ಲಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ್ದರು. ಇದೀಗ 2025 ರ ಐಪಿಎಲ್​ನಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ.

2022 ಕೊನೆಯ ಐಪಿಎಲ್

Pic credit: Google

ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕರುಣ್ ನಾಯರ್ ಮುಂಬೈ ಇಂಡಿಯನ್ಸ್ ವಿರುದ್ಧ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು 40 ಎಸೆತಗಳಲ್ಲಿ 89 ರನ್ ಗಳಿಸಿದರು.

40 ಎಸೆತಗಳಲ್ಲಿ 89 ರನ್

Pic credit: Google

12 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡ ಅವರ ಇನ್ನಿಂಗ್ಸ್, ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್​ ಬ್ಯಾಟ್‌ನಿಂದ ಬಂದ ಎರಡನೇ ಅತಿದೊಡ್ಡ ಇನ್ನಿಂಗ್ಸ್ ಆಗಿದೆ.

ಎರಡನೇ ದೊಡ್ಡ ಇನ್ನಿಂಗ್ಸ್

Pic credit: Google

ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್​  ಅತ್ಯಧಿಕ ಸ್ಕೋರ್ ಮಾಡಿದ ದಾಖಲೆ ಜೋಸ್ ಬಟ್ಲರ್ ಹೆಸರಿನಲ್ಲಿದೆ, ಅವರು ಕಳೆದ ಸೀಸನ್‌ನಲ್ಲಿ ಅಜೇಯ 107 ರನ್ ಗಳಿಸಿದ್ದರು.

ಬಟ್ಲರ್ ಅತ್ಯಧಿಕ ಸ್ಕೋರ್

Pic credit: Google

ಕಳೆದ ಸೀಸನ್‌ನಲ್ಲಿ ರೋಹಿತ್ ಶರ್ಮಾ ಕೂಡ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದು 68 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

ರೋಹಿತ್ ಶರ್ಮಾ

Pic credit: Google

ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಶುತೋಷ್ ಶರ್ಮಾ ಕೂಡ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಅಜೇಯ 66 ರನ್ ಗಳಿಸುವಲ್ಲಿ ಯಶಸ್ವಿಯಾದರು.

ಅಶುತೋಷ್ 66 ರನ್

Pic credit: Google