ಐಪಿಎಲ್‌ನಲ್ಲಿ ಯಶಸ್ವಿ ರನ್ ಚೇಸ್ ಬಗ್ಗೆ ಮಾತನಾಡುವಾಗ, ವಿರಾಟ್ ಕೊಹ್ಲಿ ಹೆಸರು ಮೊದಲು ಬರುತ್ತದೆ. ಆದರೆ ಈಗ ಕೊಹ್ಲಿಯನ್ನು ಮೀರಿಸುವ ಆಟಗಾರನೊಬ್ಬ ರನ್ ಚೇಸ್‌ನಲ್ಲಿ ಮಾಸ್ಟರ್ ಎನಿಸಿಕೊಂಡಿದ್ದಾನೆ.
ರನ್ ಚೇಸ್ ಮಾಸ್ಟರ್
ವಿರಾಟ್ ಕೊಹ್ಲಿಯಂತೆಯೇ, ಕೆಎಲ್ ರಾಹುಲ್ ಕೂಡ ಈಗ ಐಪಿಎಲ್‌ನಲ್ಲಿ ಯಶಸ್ವಿ ರನ್ ಚೇಸ್‌ನ ಮಾಸ್ಟರ್ ಆಗುತ್ತಿದ್ದಾರೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್ ರನ್ ಚೇಸಿಂಗ್ ವೇಳೆ ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ತಂದುಕೊಟ್ಟರು. ಅವರು ಔಟಾಗದೆ 93 ರನ್ ಗಳಿಸಿದರು.
ಆರ್‌ಸಿಬಿ ವಿರುದ್ಧ 93* ರನ್
ಐಪಿಎಲ್‌ನಲ್ಲಿ ಯಶಸ್ವಿ ರನ್ ಚೇಸಿಂಗ್‌ನಲ್ಲಿ, ಕೆಎಲ್ ರಾಹುಲ್ ಇದುವರೆಗೆ ಆಡಿದ 25 ಇನ್ನಿಂಗ್ಸ್‌ಗಳಲ್ಲಿ 1208 ರನ್ ಗಳಿಸಿದ್ದಾರೆ, ಇದರಲ್ಲಿ 12 ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 98 ರನ್.
ರನ್ ಚೇಸ್‌ನಲ್ಲಿ 1208 ರನ್
ಐಪಿಎಲ್‌ನಲ್ಲಿ ಯಶಸ್ವಿ ರನ್ ಚೇಸ್‌ಗಳಲ್ಲಿ ಕೆಎಲ್ ರಾಹುಲ್ ಅವರ ಸರಾಸರಿ ಅದ್ಭುತವಾಗಿದೆ. ಅವರ ಸರಾಸರಿ 71.05 ರ ಸರಾಸರಿ ಹಾಗೂ 148.58 ರ ಸ್ಟ್ರೈಕ್ ರೇಟ್ನಲ್ಲಿ ರಾಹುಲ್ ರನ್ ಕಲೆಹಾಕಿದ್ದಾರೆ.
ಅತ್ಯುತ್ತಮ ಸರಾಸರಿ
ವಿರಾಟ್ ಕೊಹ್ಲಿ ಬಗ್ಗೆ ಹೇಳುವುದಾದರೆ, ಐಪಿಎಲ್‌ನಲ್ಲಿ ಯಶಸ್ವಿ ರನ್ ಚೇಸ್‌ಗಳಲ್ಲಿ 2200 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.
ರನ್ ಚೇಸ್‌ನಲ್ಲಿ ಕೊಹ್ಲಿ
ಐಪಿಎಲ್ 2025 ರಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರೆ, ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದಾರೆ.