2025 ರ ಐಪಿಎಲ್​ನಲ್ಲಿ ಅತ್ಯಂತ ವೇಗದ ಚೆಂಡನ್ನು ಬೌಲ್ ಮಾಡಿದವರು ಯಾರು?

07 April 2025

Pic credit: Google

 By: ಪೃಥ್ವಿ ಶಂಕರ 

ಐಪಿಎಲ್ 2025 ರಲ್ಲಿ ಇದುವರೆಗೆ 19 ಪಂದ್ಯಗಳನ್ನು ನಡೆದಿವೆ. ಈ 19 ಪಂದ್ಯಗಳಲ್ಲಿ ಅತ್ಯಂತ ವೇಗವಾಗಿ ಚೆಂಡನ್ನು ಎಸೆದವರು ಯಾರು ಎಂಬುದು ನಿಮಗೆ ತಿಳಿದಿದೆಯೇ?

Pic credit: Google

ಐಪಿಎಲ್ 2025 ರ ಮೊದಲ 19 ಪಂದ್ಯಗಳಲ್ಲಿ ಅತಿ ವೇಗದ ಚೆಂಡನ್ನು ಬೌಲ್ ಮಾಡಿದವರಲ್ಲಿ ನ್ಯೂಜಿಲೆಂಡ್‌ನ ಲಾಕಿ ಫರ್ಗುಸನ್ ಅಗ್ರಸ್ಥಾನದಲ್ಲಿದ್ದಾರೆ.

Pic credit: Google

ಪಂಜಾಬ್ ಕಿಂಗ್ಸ್ ತಂಡದ ಈ ವೇಗದ ಬೌಲರ್ ಲಕ್ನೋ ವಿರುದ್ಧದ ಪಂದ್ಯದಲ್ಲಿ 153.2 ಕಿಮೀ ವೇಗದಲ್ಲಿ ಚೆಂಡನ್ನು ಎಸೆದರು.

Pic credit: Google

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಕೂಡ 150 ಪ್ಲಸ್ ಗಡಿ ದಾಟಿದ್ದು, ಅತಿ ವೇಗದ ಚೆಂಡನ್ನು ಎಸೆದ ಬೌಲರ್​ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

Pic credit: Google

ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ರಬಾಡ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 151.6 ಕಿ.ಮೀ ವೇಗದಲ್ಲಿ ಚೆಂಡನ್ನು ಬೌಲ್ ಮಾಡಿದ್ದರು.

Pic credit: Google

ಇಂಗ್ಲೆಂಡ್​ನ ವೇಗದ ಜೋಫ್ರಾ ಆರ್ಚರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಆರ್ಚರ್, ಪಂಜಾಬ್ ಕಿಂಗ್ಸ್ ವಿರುದ್ಧ ಗಂಟೆಗೆ 151 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

Pic credit: Google

ಇನ್ನು ಭಾರತೀಯ ಬೌಲರ್‌ಗಳಲ್ಲಿ, ಇದುವರೆಗಿನ ಅತ್ಯಂತ ವೇಗದ ಚೆಂಡನ್ನು ಮೊಹಮ್ಮದ್ ಸಿರಾಜ್ ಎಸೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಅವರು ಗಂಟೆಗೆ 149.6 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

Pic credit: Google