ಬೆಲೆ 27 ಕೋಟಿ, ಆಡಿದ್ದು 26 ಎಸೆತಗಳು, ನಾಯಕತ್ವ ಕಳೆದುಕೊಳ್ಳುತ್ತಾರಾ ಪಂತ್?

2 April 2025

Pic credit: Google

 By: ಪೃಥ್ವಿ ಶಂಕರ 

ಐಪಿಎಲ್ 2025 ರಲ್ಲೂ ರಿಷಭ್ ಪಂತ್ ಕಳಪೆ ಪ್ರದರ್ಶನ ಮುಂದುವರೆದಿದೆ. ಆಡಿರುವ ಸತತ ಮೂರು ಪಂದ್ಯಗಳಲ್ಲಿ ಪಂತ್ ಬ್ಯಾಟಿಂಗ್‌ ಸಪ್ಪೆಯಾಗಿದೆ.

Pic credit: Google

ಪಂಜಾಬ್ ಕಿಂಗ್ಸ್ ವಿರುದ್ಧವೂ ಪಂತ್ ಬ್ಯಾಟ್ ಕೆಲಸ ಮಾಡಲಿಲ್ಲ. ಐದು ಎಸೆತಗಳನ್ನಾಡಿದ ಪಂತ್ ಕೇವಲ ಎರಡು ರನ್ ಗಳಿಸಲು ಸಾಧ್ಯವಾಯಿತು.

Pic credit: Google

ಈ ಸೀಸನ್‌ನಲ್ಲಿ ಪಂತ್ ಅವರನ್ನು ಲಕ್ನೋ ತಂಡ 27 ಕೋಟಿಗೆ ಖರೀದಿಸಿದೆ. ಕುತೂಹಲಕಾರಿ ಸಂಗತಿಯೆಂದರೆ ಪಂತ್ ಇದುವರೆಗೆ ಆಡಿರುವುದು ಕೇವಲ 26 ಎಸೆತಗಳನ್ನು ಮಾತ್ರ.

Pic credit: Google

ಪಂತ್ ಇದುವರೆಗೆ 3 ಪಂದ್ಯಗಳಲ್ಲಿ ಕೇವಲ 17 ರನ್ ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

Pic credit: Google

ರಿಷಭ್ ಪಂತ್ ಅವರ ಈ ಪ್ರದರ್ಶನದ ನಂತರ, ಲಕ್ನೋ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅವರನ್ನು ನಾಯಕತ್ವದಿಂದ ತೆಗೆದುಹಾಕಬೇಕೆಂಬ ಬೇಡಿಕೆಯೂ ಇದೆ.

Pic credit: Google

ರಿಷಭ್ ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ. ಅವರು ಒಂದು ಸೀಸನ್‌ಗೆ 27 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ.

Pic credit: Google

ಕಳೆದ ಮೂರು ಸೀಸನ್​ಗಳಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದರು, ಈಗ ಪಂತ್ ಈ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ, ಅವರ ನಾಯಕತ್ವವು ತಂಡಕ್ಕೆ ಯಶಸ್ಸು ತಂದುಕೊಟ್ಟಿಲ್ಲ.

Pic credit: Google