IPL 2025: 5 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್

30 march 2025

Pic credit: Twitter

 By: ಪೃಥ್ವಿ ಶಂಕರ 

ಐಪಿಎಲ್ 2025 ರ ತಮ್ಮ ಎರಡನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೇವಲ 163 ರನ್‌ಗಳಿಗೆ ಕಟ್ಟಿಹಾಕಿದರು.

Pic credit: Twitter

ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ವೇಗಿ ಮಿಚೆಲ್ ಸ್ಟಾರ್ಕ್, ಅವರು 35 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ಈ ಮೂಲಕ, ಅವರು ಐಪಿಎಲ್‌ನಲ್ಲಿ 5 ವಿಕೆಟ್ ಪಡೆದ ದೆಹಲಿಯ ಎರಡನೇ ಬೌಲರ್ ಎನಿಸಿಕೊಂಡರು.

Pic credit: Twitter

17 ವರ್ಷಗಳ ನಂತರ, ದೆಹಲಿ ಫ್ರಾಂಚೈಸಿ ಪರ ಬೌಲರ್ ಒಬ್ಬರು 5 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮೊದಲು, ಅಮಿತ್ ಮಿಶ್ರಾ 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 5/17 ವಿಕೆಟ್ ಗಳಿಸಿದ್ದರು.

Pic credit: Twitter

ಮಿಚೆಲ್ ಸ್ಟಾರ್ಕ್ 35 ನೇ ವಯಸ್ಸಿನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ದಾಖಲೆ ನಿರ್ಮಿಸಿದರು. ಐಪಿಎಲ್‌ನಲ್ಲಿ 5 ವಿಕೆಟ್ ಕಬಳಿಸಿದ ಅತ್ಯಂತ ಹಿರಿಯ ವೇಗಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

Pic credit: Twitter

ಇದು ಮಾತ್ರವಲ್ಲದೆ, ಐಪಿಎಲ್ ಮತ್ತು ಟಿ20 ವೃತ್ತಿಜೀವನದಲ್ಲಿ ಮಿಚೆಲ್ ಸ್ಟಾರ್ಕ್ ಅವರ ಮೊದಲ 5 ವಿಕೆಟ್ ಗೊಂಚಲು ಇದಾಗಿದ್ದು, ಇದರೊಂದಿಗೆ ಅವರು ತಮ್ಮ ವೃತ್ತಿಜೀವನಕ್ಕೆ ಹೊಸ ಸಾಧನೆಯನ್ನು ಸೇರಿಸಿಕೊಂಡಿದ್ದಾರೆ.

Pic credit: Twitter

ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಪಡೆದ ಸ್ಟಾರ್ಕ್, ಪ್ರಸ್ತುತ 8 ವಿಕೆಟ್‌ಗಳೊಂದಿಗೆ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ.

Pic credit: Twitter

ಆದಾಗ್ಯೂ, ಸನ್‌ರೈಸರ್ಸ್ ಪರ ಅದ್ಭುತ ಬ್ಯಾಟಿಂಗ್ ಮಾಡಿದ ಯುವ ಬ್ಯಾಟ್ಸ್‌ಮನ್ ಅನಿಕೇತ್ ವರ್ಮಾ ಕೇವಲ 41 ಎಸೆತಗಳಲ್ಲಿ 74 ರನ್‌ಗಳ ಇನ್ನಿಂಗ್ಸ್ ಆಡಿ ತಮ್ಮ ಮೊದಲ ಅರ್ಧಶತಕ ಪೂರೈಸಿದರು.

Pic credit: Twitter