ಐಪಿಎಲ್‌ನಲ್ಲಿ ಕಮಾಲ್ ಮಾಡುತ್ತಿರುವ ಇಬ್ಬರು ಆಟೋ ಚಾಲಕರ ಮಕ್ಕಳು
24 march 2025
Pic credit: Google
ಪೃಥ್ವಿ ಶಂಕರ
ಐಪಿಎಲ್‌ನಲ್ಲಿ ಸಾಕಷ್ಟು ಕ್ರಿಕೆಟಿಗರು ತಮ್ಮ ಪ್ರತಿಭೆಯ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಇಬ್ಬರು ಆಟೋ ಚಾಲಕರ ಪುತ್ರರು ಸೇರಿದ್ದಾರೆ.
Pic credit: Google
ಈ ಪಟ್ಟಿಯಲ್ಲಿರುವ ಇತ್ತೀಚಿನ ಹೆಸರೆಂದರೆ ಅದು ಯುವ ಸ್ಪಿನ್ನರ್ ವಿಘ್ನೇಶ್ ಪುತೂರ್. ಈ ಯುವ ಗೂಗ್ಲಿ ಸ್ಪಿನ್ನರ್ ತಾವು ಆಡಿದ ಮೊದಲ ಪಂದ್ಯದಲ್ಲೇ ಕಮಾಲ್ ಮಾಡಿದ್ದಾರೆ.
Pic credit: Google
ವಿಘ್ನೇಶ್ 2025 ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ತಮ್ಮ ಮೊದಲ ಪಂದ್ಯವನ್ನು ಆಡುವವರೆಗೂ ವಿಘ್ನೇಶ್ ಪುತೂರ್ ಎಂಬ ಹೆಸರು ನಿಮಗೆ ತಿಳಿದಿರಲಿಕ್ಕಿಲ್ಲ. ಆದರೆ, ಆ ಪಂದ್ಯದ ನಂತರ, ಈ ಆಟಗಾರನ ಹೆಸರು ಸಾಕಷ್ಟು ಸುದ್ದಿಯಲ್ಲಿದೆ.
Pic credit: Google
ವಿಘ್ನೇಶ್ ಪುತೂರ್ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮುಂಬೈ ಪರ ಕಣಕ್ಕಿಳಿದಿದ್ದ ವಿಘ್ನೇಶ್, ಸಿಎಸ್‌ಕೆ ವಿರುದ್ಧ 4 ಓವರ್‌ಗಳಲ್ಲಿ 32 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.
Pic credit: Google
ವಿಘ್ನೇಶ್ ಪುತೂರ್ ಗಿಂತ ಮೊದಲು, ಮೊಹಮ್ಮದ್ ಸಿರಾಜ್ ಕೂಡ ಐಪಿಎಲ್‌ನಲ್ಲಿ ಹೆಸರು ಮಾಡಿ ಆ ಬಳಿಕ ಟೀಂ ಇಂಡಿಯಾ ಸೇರಿದವರು. ಅವರ ತಂದೆ ಕೂಡ ಆಟೋ ರಿಕ್ಷಾ ಚಾಲಕರಾಗಿದ್ದರು
Pic credit: Google
ಮೊಹಮ್ಮದ್ ಸಿರಾಜ್ 2017 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಮತ್ತು ಅದೇ ವರ್ಷ, ಅವರು ಭಾರತ ಪರ ಟಿ20ಗೆ ಪಾದಾರ್ಪಣೆ ಮಾಡಿದರು.
Pic credit: Google
ಐಪಿಎಲ್ ಆಡಿದ 3 ವರ್ಷಗಳಲ್ಲಿ, ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿದರು.
Pic credit: Google
ವಿಘ್ನೇಶ್ ಪುತ್ತೂರು ಅವರಿಗೆ ಪ್ರಸ್ತುತ 24 ವರ್ಷ. ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲಿಯೇ ಪ್ರಭಾವ ಬೀರಿರುವ ಅವರು ಸಧ್ಯದಲ್ಲೇ ಭಾರತ ತಂಡಕ್ಕೆ ಸೇರುವ ಸಾಧ್ಯತೆಗಳು ಹೆಚ್ಚಿವೆ.