ಐಪಿಎಲ್‌ನಲ್ಲಿ ಬಳಸಲಾಗುವ ಚೆಂಡು ಯಾವುದು? ಅದರ ಬೆಲೆ ಎಷ್ಟು?

19 march 2025

Pic credit: Google

ಪೃಥ್ವಿ ಶಂಕರ

ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೈದಾನದಲ್ಲಿ ರನ್‌ಗಳ ಮಳೆ ಸುರಿಯುವುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಐಪಿಎಲ್‌ನಲ್ಲಿ ಯಾವ ಚೆಂಡನ್ನು ಬಳಸಲಾಗುತ್ತದೆ? ಇದರ ಬೆಲೆ ಎಷ್ಟು? ಎಂಬುದನ್ನು ನೋಡೋಣ

Pic credit: Google

ಐಪಿಎಲ್‌ನಲ್ಲಿ ಕೂಕಬುರ್ರಾ ಚೆಂಡನ್ನು ಬಳಸಲಾಗುತ್ತದೆ. ಈ ಬಿಳಿ ಬಣ್ಣದ ಚೆಂಡನ್ನು ಐಪಿಎಲ್‌ನಲ್ಲಿ ಮಾತ್ರವಲ್ಲದೆ ಐಸಿಸಿ ಪಂದ್ಯಾವಳಿಗಳು ಮತ್ತು ದ್ವಿಪಕ್ಷೀಯ ಸರಣಿಗಳಲ್ಲಿ ಬಳಸಲಾಗುತ್ತದೆ.

Pic credit: Google

ಇದು ಮಾತ್ರವಲ್ಲದೆ ಪ್ರಪಂಚದಲ್ಲಿ ಎಲ್ಲೆಲ್ಲಿ ಬಿಳಿ ಚೆಂಡಿನ ಕ್ರಿಕೆಟ್ ಆಡಲಾಗುತ್ತದೆಯೋ, ಅಲ್ಲಿ ಕೂಕಬುರ್ರಾ ಚೆಂಡನ್ನು ಮಾತ್ರ ಬಳಸಲಾಗುತ್ತದೆ. ಹಾಗಾದರೆ ಈ ಚೆಂಡಿನ ವಿಶೇಷತೆ ಏನು?

Pic credit: Google

ಕೂಕಬುರ್ರಾ ಚೆಂಡನ್ನು 1970 ರ ದಶಕದಿಂದ ಬಳಸಲಾಗುತ್ತಿದೆ. ಈ ಚೆಂಡಿನ ವಿಶೇಷತೆ ಏನೆಂದರೆ, ಈ ಚೆಂಡಿನ ಮೇಲ್ಪದರದ ಗುಣಮಟ್ಟವು ಚೆಂಡು ತುಂಬಾ ದೂರ ಪ್ರಯಾಣಿಸಲು ಸಹಾಯ ಮಾಡುತ್ತದೆ.

Pic credit: Google

ಇದೇ ಕಾರಣಕ್ಕೆ ಐಪಿಎಲ್‌ನಲ್ಲಿ ದೀರ್ಘ ಸಿಕ್ಸರ್‌ಗಳನ್ನು ಹೊಡೆಯುವುದನ್ನು ನೋಡುತ್ತೇವೆ. ಚೆಂಡಿನ ಹೊಲಿಗೆಯ ಒಳಗಿನ ಎರಡು ಪದರಗಳನ್ನು ಮಾತ್ರ ಕೈಯಿಂದ ಹೊಲಿಯಲಾಗುತ್ತದೆ. ಉಳಿದ ಎಲ್ಲಾ ಹೊಲಿಗೆಗಳನ್ನು ಯಂತ್ರದಿಂದ ಸಹಾಯದಿಂದ ಹೊಲಿಯಲಾಗಿರುತ್ತದೆ.

Pic credit: Google

ಈ ಬಾರಿಯ ಐಪಿಎಲ್​ನಲ್ಲೂ ಕೂಕಬುರ್ರಾ ಚೆಂಡನ್ನು ಬಳಸಲಾಗುವುದು. ಈ ಚೆಂಡಿನ ಬೆಲೆಯ ಬಗ್ಗೆ ಹೇಳುವುದಾದರೆ, ಒಂದು ಚೆಂಡಿನ ಬೆಲೆ ಸುಮಾರು 18000 ರೂ. ಎಂದು ಹೇಳಲಾಗುತ್ತದೆ.

Pic credit: Google