ಸೆಮೀಸ್​ನಿಂದ ಹೊರಬಿದ್ದ ಆಸೀಸ್- ಆಫ್ರಿಕಾಗೆ ಸಿಕ್ಕ ಹಣವೆಷ್ಟು?

6 march 2025

Pic credit: Google

ಪೃಥ್ವಿ ಶಂಕರ

2025 ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿತು.

Pic credit: Google

ಇದರೊಂದಿಗೆ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಆಫ್ರಿಕಾ ತಂಡದ ಕನಸು ಭಗ್ನವಾಯಿತು. ಹಾಗೆಯೇ ಈ ಸೋಲಿನಿಂದಾಗಿ ಹರಿಣಗಳ ತಂಡಕ್ಕೆ ಕೋಟಿಗಟ್ಟಲೆ ನಷ್ಟ ಕೂಡ ಆಗಿದೆ.

Pic credit: Google

ಈ ಬಾರಿ ಸೆಮಿಫೈನಲ್‌ನಲ್ಲಿ ಸೋತ ಎರಡೂ ತಂಡಗಳಿಗೆ ಸುಮಾರು 5 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು. ಆದರೆ ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆದ್ದಿದ್ದರೆ, ಅದರ ಬಹುಮಾನದ ಹಣ ದುಪ್ಪಟ್ಟಾಗುತ್ತಿತ್ತು.

Pic credit: Google

ಈ ಬಾರಿ ರನ್ನರ್ ಅಪ್ ತಂಡವು 1.12 ಮಿಲಿಯನ್ ಡಾಲರ್ ಅಂದರೆ ಸುಮಾರು 10 ಕೋಟಿ ರೂಪಾಯಿಗಳನ್ನು ಪಡೆಯಲಿದೆ.

Pic credit: Google

ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದರೆ ಕನಿಷ್ಠ 10 ಕೋಟಿ ರೂ. ಗಳಿಸುತ್ತಿತ್ತು. ಆದರೆ ಈ ಸೋಲಿನಿಂದಾಗಿ ಅವರಿಗೆ 5 ಕೋಟಿ ರೂ. ನಷ್ಟವಾಯಿತು. ಕೋಟಿಗಟ್ಟಲೆ ನಷ್ಟ.

Pic credit: Google

ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾದ ಪ್ರದರ್ಶನ ತುಂಬಾ ಚೆನ್ನಾಗಿತ್ತು. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಹರಿಣಗಳು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿತು.

Pic credit: Google

ದಕ್ಷಿಣ ಆಫ್ರಿಕಾವನ್ನು ಹೊರತುಪಡಿಸಿ, ಆಸ್ಟ್ರೇಲಿಯಾ ತಂಡವು ಈ ಬಾರಿ ಸೆಮಿಫೈನಲ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ಆಸೀಸ್ ತಂಡಕ್ಕೂ 5 ಕೋಟಿ ರೂಪಾಯಿ ಬಹುಮಾನದ ಹಣ ಸಿಗುತ್ತದೆ.

Pic credit: Google

ಮತ್ತೊಂದೆಡೆ, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡಕ್ಕೆ 2.24 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು 20 ಕೋಟಿ ರೂಪಾಯಿಗಳನ್ನು ನೀಡಲಾಗುವುದು.

Pic credit: Google

Pic credit: Google

Pic credit: Google

Pic credit: Google

Pic credit: Google

Pic credit: Google