ಅತಿ ಹೆಚ್ಚು ವೀಕ್ಷಣೆ; ಆರ್​ಸಿಬಿಯದ್ದೇ ಟಾಪ್ 3 ಪಂದ್ಯಗಳು ..!

10 April 2025

Pic credit: Google

 By: ಪೃಥ್ವಿ ಶಂಕರ 

ಇಂಡಿಯನ್ ಪ್ರೀಮಿಯರ್ ಲೀಗ್ ಜನಪ್ರಿಯತೆ ಪಂದ್ಯದಿಂದ ಪಂದ್ಯಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಈಗ ಬಿಡುಗಡೆಯಾಗಿರುವ ಅಂಕಿಅಂಶಗಳೇ ಸಾಕ್ಷಿಯಾಗಿವೆ.

Pic credit: Google

ಐಪಿಎಲ್ 2025 ರಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯವೆಂದರೆ ಆರ್‌ಸಿಬಿ ಆಡಿದ ಪಂದ್ಯಗಳು. ದೊಡ್ಡ ವಿಷಯವೆಂದರೆ ಟಾಪ್ 3 ಪಂದ್ಯಗಳು ಆರ್‌ಸಿಬಿಯದ್ದೇ ಆಗಿವೆ.

Pic credit: Google

ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವನ್ನು ಅತಿ ಹೆಚ್ಚು ವೀಕ್ಷಿಸಲಾಗಿದೆ. ಇದು ಐಪಿಎಲ್ 2025 ರ ಮೊದಲ ಪಂದ್ಯವಾಗಿದ್ದು, ಜಿಯೋ ಹಾಟ್‌ಸ್ಟಾರ್‌ನಲ್ಲಿ 41.7 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Pic credit: Google

ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವೂ 37.4 ಕೋಟಿ ವೀಕ್ಷಣೆಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ.

Pic credit: Google

ಆ ಬಳಿಕ ನಡೆದಿದ್ದ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು 34.7 ಕೋಟಿ ಜನರು ವೀಕ್ಷಿಸಿದ್ದು ಇದು ಮೂರನೇ ಸ್ಥಾನದಲ್ಲಿದೆ.

Pic credit: Google

ಇದನ್ನು ಗಮನಿಸಿದರೆ ಐಪಿಎಲ್ 2025 ರಲ್ಲಿ ಆರ್‌ಸಿಬಿ ಪಡೆದುಕೊಂಡಿರುವ ಉತ್ತಮ ಆರಂಭ, ಹೆಚ್ಚೆಚ್ಚು ಅಭಿಮಾನಿಗಳನ್ನು ಈ ಮಿಲಿಯನ್ ಡಾಲರ್ ಟೂರ್ನಿಯತ್ತೆ ಸೆಳೆಯುವಂತೆ ಮಾಡಿದೆ.

Pic credit: Google

ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡ ಇದುವರೆಗೆ 4 ಪಂದ್ಯಗಳನ್ನಾಡಿದ್ದು 3 ಪಂದ್ಯಗಳಲ್ಲಿ ಜಯಗಳಿಸಿದೆ. ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Pic credit: Google