400 ರನ್; ಲಾರಾ ಐತಿಹಾಸಿಕ ಇನ್ನಿಂಗ್ಸ್​ಗೆ ಭರ್ತಿ 21 ವರ್ಷ

12 April 2025

Pic credit: Google

 By: ಪೃಥ್ವಿ ಶಂಕರ 

ಕ್ರಿಕೆಟ್‌ನಲ್ಲಿ ಪ್ರತಿದಿನ ದಾಖಲೆಗಳು ಸೃಷ್ಠಿಯಾಗುತ್ತವೆ ಮತ್ತು ಮುರಿಯಲ್ಪಡುತ್ತವೆ. ಆದರೆ ಏಪ್ರಿಲ್ 12 ರಂದು, ಯಾರೂ ಮುರಿಯಲು ಸಾಧ್ಯವಾಗದ ವಿಶ್ವ ದಾಖಲೆಯೊಂದು ಸೃಷ್ಟಿಯಾಯಿತು.

ಏಪ್ರಿಲ್ 12 ರ ವಿಶೇಷತೆ

Pic credit: Google

ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ರಿಯಾನ್ ಲಾರಾ ಅವರ ಹೆಸರಿನಲ್ಲಿದೆ. 21 ವರ್ಷಗಳಲ್ಲಿ ಯಾರೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

 ಲಾರಾ ವಿಶ್ವ ದಾಖಲೆ

Pic credit: Google

ಏಪ್ರಿಲ್ 12, 2004 ರಂದು ಇಂಗ್ಲೆಂಡ್ ವಿರುದ್ಧದ ಆಂಟಿಗುವಾ ಟೆಸ್ಟ್ ಪಂದ್ಯದಲ್ಲಿ ಬ್ರಿಯಾನ್ ಲಾರಾ ಅಜೇಯ 400 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಆಟಗಾರ ಈ ಸಂಖ್ಯೆಯನ್ನು ಮುಟ್ಟಲು ಸಾಧ್ಯವಾಗಿಲ್ಲ.

400 ರನ್‌ಗಳ ಇನ್ನಿಂಗ್ಸ್

Pic credit: Google

ಏಪ್ರಿಲ್ 12, 2005 ರಂದು, ಸಚಿನ್ ತೆಂಡೂಲ್ಕರ್ ಪಾಕಿಸ್ತಾನ ವಿರುದ್ಧ 130 ಎಸೆತಗಳಲ್ಲಿ 123 ರನ್ ಗಳಿಸಿ ಶತಕ ಸಿಡಿಸಿದ್ದರು. ಆದರೆ ಈ ಪಂದ್ಯದಲ್ಲಿ ಭಾರತ ಸೋತಿತು.

ಸಚಿನ್ ತೆಂಡೂಲ್ಕರ್ ಶತಕ

Pic credit: Google

ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಡ್ವೇನ್ ಸ್ಮಿತ್ ಕೂಡ ಏಪ್ರಿಲ್ 12 ರಂದು ಜನಿಸಿದರು. ಅವರು ಇಂದು ತಮ್ಮ 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಡ್ವೇನ್ ಸ್ಮಿತ್ ಹುಟ್ಟುಹಬ್ಬ

Pic credit: Google

ಡ್ವೇನ್ ಸ್ಮಿತ್ ವೆಸ್ಟ್ ಇಂಡೀಸ್ ಪರ 10 ಟೆಸ್ಟ್, 105 ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 2400 ಕ್ಕೂ ಹೆಚ್ಚು ರನ್ ಮತ್ತು 75 ವಿಕೆಟ್‌ಗಳನ್ನು ಸಹ ಪಡೆದಿದ್ದರು.

ಡ್ವೇನ್ ಸ್ಮಿತ್ ವೃತ್ತಿ

Pic credit: Google

ಈ ದಿನ ಭಾರತೀಯ ಕ್ರಿಕೆಟ್‌ಗೆ ತುಂಬಾ ವಿಶೇಷವಾಗಿದೆ. 1976 ರ ಈ ದಿನದಂದು, ಭಾರತ ತಂಡವು ವೆಸ್ಟ್ ಇಂಡೀಸ್ ನೀಡಿದ 403 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆದ್ದಿತು.

ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು

Pic credit: Google